ಕರ್ನಾಟಕ

karnataka

ETV Bharat / state

ಅನಧಿಕೃತವಾಗಿ ತರೆದಿದ್ದ ಅಂಗಡಿ ತೆರವುಗೊಳಿಸಿದ ಶಿವಮೊಗ್ಗ ಪಾಲಿಕೆ - ಅಂಗಡಿ ತೆರವು

ಪಾಲಿಕೆಯ ಕಂದಾಯ ಇಲಾಖೆಯ ಎಇಇ ಅಕ್ಷತ್, ಎಇ ಪೂರ್ಣಿಮ ಹಾಗೂ ಕಂದಾಯಾಧಿಕಾರಿ ಬಾಲಾಜಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

ತೆರವು
ತೆರವು

By

Published : Apr 28, 2021, 4:57 PM IST

ಶಿವಮೊಗ್ಗ: ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ಅಂಗಡಿಯನ್ನು ಮಹಾನಗರ ಪಾಲಿಕೆಯವರು ತೆರವು ಮಾಡಿಸಿದ್ದಾರೆ.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಸಣ್ಣ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ನಾಲ್ಕು ಅಂಗಡಿಗಳ ಮಧ್ಯೆ ಸ್ವಲ್ಪ ಜಾಗ ಬಿಟ್ಟು ಅಂಗಡಿಗಳನ್ನು ಹಾಕಲಾಗಿದೆ. ಆದರೆ ಸ್ಟೋರ್​ಗಳ ಮಧ್ಯೆ ಖಾಲಿ ಇರುವ ಎರಡು ಕಡೆ ರಾತ್ರೋರಾತ್ರಿ ಅಂಗಡಿಗಳನ್ನು ಹಾಕಲಾಗಿದೆ. ಈ ಬಗ್ಗೆ ಮೇಯರ್ ಸುನೀತ ಅಣ್ಣಪ್ಪನವರಿಗೆ ದೂರು ಬಂದ ಹಿನ್ನೆಲೆ ತೆರವು ಮಾಡುವಂತೆ ಸೂಚಿಸಿದ್ದರು.

ಈ ಹಿನ್ನೆಲೆ ಇಂದು ಪಾಲಿಕೆಯ ಕಂದಾಯ ಇಲಾಖೆಯ ಎಇಇ ಅಕ್ಷತ್, ಎಇ ಪೂರ್ಣಿಮ ಹಾಗೂ ಕಂದಾಯಾಧಿಕಾರಿ ಬಾಲಾಜಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

ABOUT THE AUTHOR

...view details