ಶಿವಮೊಗ್ಗ:ಕೊರೊನಾ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಸೋಂಕಿನಿಂದ ತಪ್ಪಿಸಿಕೊಳ್ಳಲು ಸ್ಟೀಮ್ ಮೊರೆ ಹೋಗಿದ್ದಾರೆ.
ನಗರದ ಡಿಎಆರ್ ಆವರಣದಲ್ಲಿ ಪೊಲೀಸರಿಗೆ ಸ್ಟೀಮ್ ನೀಡುವ ಕೆಲಸ ಆರಂಭಿಸಲಾಗಿದೆ. ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಹಾಗೂ ಕರ್ತವ್ಯ ಮುಗಿದ ಬಳಿಕ ಪೊಲೀಸರು ಸ್ಟೀಮ್ ತೆಗೆದುಕೊಳ್ಳುತ್ತಿದ್ದಾರೆ. ಈ ಮೂಲಕ ಪೊಲೀಸರು ಕರೋನಾದಿಂದ ದೂರವಿರುವ ಪ್ರಯತ್ನ ಮಾಡುತ್ತಿದ್ದಾರೆ. ಕುಕ್ಕರ್ನಲ್ಲಿ ನೀರನ್ನು ಹಾಕಿ ಅದಕ್ಕೆ ಕಾರ್ಬಲ್ ಪ್ಲಸ್, ನೀಲಗಿರಿ ಎಣ್ಣೆ, ಬೇವಿನ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕುದಿಸಲಾಗುತ್ತಿದೆ. ಹೀಗೆ ಕುದಿಯಲಾರಂಭಿಸಿದ ಈ ಮಿಶ್ರಣ ಕುಕ್ಕರ್ ವಿಶಲ್ ಭಾಗದಿಂದ ಸ್ಟೀಮ್ ಆಗಿ ಹೊರ ಬರುತ್ತದೆ. ಇದಕ್ಕೆ ಪೈಪ್ ಅಳವಡಿಸಲಾಗಿದ್ದು, ಈ ಪೈಪ್ ಮೂಲಕ ಬರುವ ಸ್ಟೀಮನ್ನು ಪೊಲೀಸರು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಪೊಲೀಸರ ಉಸಿರಾಟದ ಸಮಸ್ಯೆ ಪರಿಹಾರವಾಗುತ್ತಿದೆ.