ಕರ್ನಾಟಕ

karnataka

ETV Bharat / state

ಶಿವಮೊಗ್ಗ ಪೊಲೀಸ್ರಿಂದ ಸರಗಳ್ಳನ ಬಂಧನ: 18 ಗ್ರಾಂ ಚಿನ್ನಾಭರಣ ವಶ - 54 ಸಾವಿರ ರೂ ಮೌಲ್ಯದ ಒಟ್ಟು 18 ಗ್ರಾಂ ಚಿನ್ನಾಭರಣ ವಶ

ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ನಡೆದ ಎರಡು ಸರಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಗಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರಗಳ್ಳನ ಬಂಧನ: 18 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದ್ರು ಶಿವಮೊಗ್ಗ ಪೊಲೀಸ್

By

Published : Oct 11, 2019, 9:47 PM IST

ಶಿವಮೊಗ್ಗ:ನಗರದಲ್ಲಿ ಇತ್ತೀಚೆಗೆ ನಡೆದ ಎರಡು ಸರಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರಗಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಸರಗಳ್ಳನ ಬಂಧನ: 18 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದ್ರು ಶಿವಮೊಗ್ಗ ಪೊಲೀಸ್

ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ನಗರ ಹಾಗೂ ಹಳೇ ಜೈಲು ಆವರಣದ ಬಳಿ ಮಹಿಳೆಯರ ಸರಗಳ್ಳತನ ನಡೆಸಲಾಗಿತ್ತು. ಇದರಿಂದ ಶಿವಮೊಗ್ಗ ನಗರದ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದರು. ಈ ಕುರಿತು ಎಸ್ಪಿ ಶಾಂತರಾಜು , ಡಿವೈಎಸ್ಪಿ ಈಶ್ವರ್ ನಾಯ್ಕ ರವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಈ ತಂಡವು ಆಟೋ ಚಾಲಕ ಸಂದೀಪ್ ಎಂಬ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈತನಿಂದ 54 ಸಾವಿರ ರೂ ಮೌಲ್ಯದ ಒಟ್ಟು 18 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ABOUT THE AUTHOR

...view details