ಕರ್ನಾಟಕ

karnataka

ETV Bharat / state

ಯಶಸ್ವಿ ಪೊಲೀಸ್ ಕಾರ್ಯಾಚರಣೆ: ಮಟ್ಕಾ, ಗಾಂಜಾ ಮಾರಾಟಗಾರರ ಬಂಧನ - Illegal marijuana sale

ಶಿವಮೊಗ್ಗ ಹಾಗೂ ಭದ್ರಾವತಿಯ ಪೊಲೀಸರು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಮಟ್ಕಾ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

Shivmogga
Shivmogga

By

Published : Jul 22, 2020, 11:51 AM IST

ಶಿವಮೊಗ್ಗ: ಶಿವಮೊಗ್ಗ ಹಾಗೂ ಭದ್ರಾವತಿಯ ವಿವಿಧೆಡೆ ಅಕ್ರಮವಾಗಿ ಮಟ್ಕಾ ಹಾಗೂ ಗಾಂಜಾ‌ ಮಾರಾಟ ಮಾಡಲಾಗುತ್ತಿದೆ ಎನ್ನುವ ಅರೋಪ ಕೇಳಿ ಬಂದ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರವೀಣ್ (37) ನನ್ನು ಬಂಧಿಸಲಾಗಿದೆ. ಈತನಿಂದ 4,050 ರೂ. ನಗದು, ಓಲ್ಡ್ ಟೌನ್ ವ್ಯಾಪ್ತಿಯಲ್ಲಿ ಜಗದೀಶ್(40) ನನ್ನು ಬಂಧಿಸಿ ಈತನಿಂದ 4,320 ರೂ. ಗಳನ್ನು, ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕೂಲಿ ಬ್ಲಾಕ್ ನಲ್ಲಿ ಬಾಬು (55) ನನ್ನು ಬಂಧಿಸಿ ಈತನಿಂದ 12,150 ರೂ‌. ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅದೇ ರೀತಿ ಭದ್ರಾವತಿಯ ನ್ಯೂ ಟೌನ್ ಠಾಣೆಯ ಬೈಪಾಸ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಮೋಹನ್ (22) ಬಂಧಿಸಿದ್ದು, ಈತನ ಬಳಿದ್ದ 460 ಗ್ರಾಂ ತೂಕದ 20 ಸಾವಿರ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆದು ಕೊಳ್ಳಲಾಗಿದೆ.

ಅದೇ ರೀತಿ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿಪ್ಪು ನಗರದ ಚಾನಲ್ ಬಳಿ ಶೋಹೆಬ್(31) ಹಾಗೂ ಸಯ್ಯದ್ ಹುಸೇನ್ (19) ಅವರನ್ನು ಬಂಧಿಸಿ ಇವರಿಂದ 2,400 ಹಾಗೂ 1,800 ರೂ. ನಗದು ವಶಕ್ಕೆ ಪಡೆಲಾಗಿದೆ. ಶಿವಮೊಗ್ಗದ ಕೋಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಜಬಿವುಲ್ಲಾ, ಜೈದಾನ್ ಹಾಗೂ ಮೊಹಮದ್ ಗೌಸ್​​​​​ನನ್ನು ಬಂಧಿಸಿ, 2,800 ರೂ. ಮೌಲ್ಯದ 105 ಗ್ರಾಂ ಗಾಂಜಾವನ್ನು ಹಾಗೂ 470 ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details