ಶಿವಮೊಗ್ಗ: ತಾಲಿಬಾನ್ ಉಗ್ರವಾದಿಗಳು ಆಫ್ಘನ್ ವಶಕ್ಕೆ ಪಡೆದುಕೊಂಡ ನಂತರ ಅಲ್ಲಿ ನೆಲೆಸಿದ್ದ ಬೇರೆ ಬೇರೆ ದೇಶದವರು ಸ್ವದೇಶಕ್ಕೆ ವಾಪಸ್ ಆಗಲು ಹಾತೊರೆಯುತ್ತಿದ್ದಾರೆ. ಇದರಲ್ಲಿ ಗೃಹ ಸಚಿವರ ತವರು ಕ್ಷೇತ್ರ ತೀರ್ಥಹಳ್ಳಿಯ ಫಾದರ್ ರಾಬರ್ಟ್ ರಾಡ್ರಿಗಸ್ ಎಂಬುವರು ಸಹ ಒಬ್ಬರು.
ಅಫ್ಘಾನಿಸ್ತಾನದಿಂದ ತವರೂರು ಶಿವಮೊಗ್ಗಕ್ಕೆ ಬರಲು ಹಾತೊರೆಯುತ್ತಿದ್ದಾರೆ ಪಾದ್ರಿ! - Afghanistan
ತಾಲಿಬಾನ್ ಆಫ್ಘನ್ ವಶಕ್ಕೆ ಪಡೆದುಕೊಂಡ ನಂತರ ಈಗ ಅಲ್ಲಿಂದ ತಮ್ಮ ತವರು ದೇಶಕ್ಕೆ ಹೋಗಲು ಜನ ಹಾತೊರೆಯುತ್ತಿದ್ದಾರೆ. ಹಾಗೆ ಶಿವಮೊಗ್ಗದ ಪಾದ್ರಿ ಕೂಡ ಅಲ್ಲಿ ಸಿಲುಕಿಕೊಂಡಿದ್ದು, ಕುಟುಂಬದವರು ಅವರು ಬರುವ ದಾರಿಯನ್ನೇ ನೋಡುತ್ತಿದ್ದಾರೆ.
Shimoga padri Robert rodriguez stuck in Afghanistan
ರಾಡ್ರಿಗಸ್ ಕಳೆದ ಎರಡು ವರ್ಷಗಳ ಹಿಂದೆ ತಾಲಿಬಾನ್ಗೆ ಹೋಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಜೊತೆಗೆ ಮಂಗಳೂರು ಮೂಲದ ಫಾದರ್ ಸಿಕ್ವೇರಾ ಎಂಬುವರು ಸಹ ಇದ್ದಾರೆ. ಅಫ್ಘಾನಿಸ್ತಾನ ತಾಲಿತಾನ್ಗಳ ಕೈಗೆ ಸಿಲುಕುತ್ತಿದೆ ಎನ್ನುತ್ತಿದ್ದಂತಯೇ ಜನ ಏಪೋರ್ಟ್ ನತ್ತ ಧಾವಿಸಿ ಹಲವರಿಗೆ ವಿಮಾನ ಸಿಗದೆ ವಾಪಸ್ ಆಗಿದ್ದಾರೆ.
ಇದೀಗ ಭಾರತ ಸರ್ಕಾರದಿಂದ ಉಳಿದ ಭಾರತೀಯರನ್ನು ಕರೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ರಾಡ್ರಿಗಸ್ ಬರಲಿದ್ದಾರೆ.