ಶಿವಮೊಗ್ಗ: ಮಹಾನಗರ ಪಾಲಿಕೆಯ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಒಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದ ಕಾರಣ ಪಾಲಿಕೆಯನ್ನು ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಸೀಲ್ಡೌನ್ - ಶಿವಮೊಗ್ಗ ಮಹಾನಗರ ಪಾಲಿಕೆ
ಶಿವಮೊಗ್ಗದ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗಳನ್ನು ಸೀಲ್ಡೌನ್ ಮಾಡಲಾಗಿದೆ.
ಸದ್ಯ ಪಾಲಿಕೆಯ ಎಲ್ಲ ವಿಭಾಗದ ಕಚೇರಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಮೇಯರ್, ಉಪಮೇಯರ್ ಹಾಗೂ ಆಯುಕ್ತರ ಕಚೇರಿಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು. ಇದರಿಂದ ಪಾಲಿಕೆಯಲ್ಲಿ ಇಂದು ಕೆಲಸ ಬಂದ್ ಆಗಿದೆ.
ಅದೇ ರೀತಿ ಜಿಲ್ಲಾ ಪಂಚಾಯತ್ನ ಎಫ್ಡಿಎ ಒಬ್ಬರಿಗೂ ಸೋಂಕು ಕಂಡು ಬಂದ ಕಾರಣ ಜಿಲ್ಲಾ ಪಂಚಾಯತ್ನ ಎಲ್ಲಾ ವಿಭಾಗಗಳನ್ನು ಸೀಲ್ಡೌನ್ ಮಾಡಲಾಗಿದೆ. ಇದರಿಂದಾಗಿ ಜಿಲ್ಲಾ ಪಂಚಾಯತ್ನ ಎಲ್ಲಾ ವಿಭಾಗಗಳನ್ನು ಸಹ ಬಂದ್ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ನಿನ್ನೆ ಮಧ್ಯಾಹ್ನದಿಂದ ಬಂದ್ ಮಾಡಲಾಗಿದೆ. ಇಂದು ಸಹ ಸೀಲ್ಡೌನ್ನಲ್ಲಿ ಇರಲಿದ್ದು, ನಾಳೆ ಕಚೇರಿಗಳು ಕಾರ್ಯಾರಂಭ ಮಾಡಲಿವೆ.