ಕರ್ನಾಟಕ

karnataka

ETV Bharat / state

ಗಲಾಟೆ-ಗದ್ದಲದಲ್ಲೇ ಮುಂದುವರಿದ ಶಿವಮೊಗ್ಗ ಮಹಾನಗರ ಪಾಲಿಕೆ ಸಭೆ - ಶಿವಮೊಗ್ಗ ಮಹಾನಗರ ಪಾಳಿಕೆ ಉಪಮೇಯರ್​

ನಿನ್ನೆ ನಡೆದ ಶಿವಮೊಗ್ಗ ಮಹಾನಗರ ಪಾಲಿಕೆ ಸಭೆಯಲ್ಲಿ ಕಡತ ವಿಲೇವಾರಿ ಸಮಸ್ಯೆಗೆ ತ್ವರಿತ ಪರಿಹಾರ ಸೂಚಿಸುವುದಾಗಿ ಮೇಯರ್​ ಹಾಗೂ ಉಪಮೇಯರ್​ ತಿಳಿಸಿದ್ದಾರೆ.

ಸಭೆ

By

Published : Nov 5, 2019, 3:19 AM IST

ಶಿವಮೊಗ್ಗ:ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಬಹುತೇಕ ಸದಸ್ಯರು ಪಾಲಿಕೆಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪಾಲಿಕೆ ಆಯುಕ್ತ ಚಿದಾನಂದ್ ಹಾಗೂ ಉಪಮೇಯರ್ ಚನ್ನಬಸಪ್ಪ, ಸಕಾಲ ವ್ಯವಸ್ಥೆಯನ್ನು ಹತ್ತು ದಿನದಲ್ಲಿ ಜಾರಿ ಮಾಡಿ ಕಡತ ವಿಲೇವಾರಿ ಸಮಸ್ಯೆಗೆ ಪರಿಹಾರ ಮಾಡುವುದಾಗಿ ಘೋಷಿಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ಸಭೆ

ಸೋಮವಾರ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಚಿದಾನಂದ್​, ಸಕಾಲ ಪ್ರಾರಂಭಕ್ಕೆ ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ನಿವಾರಣೆ ಮಾಡಿಕೊಂಡು ಕಾಲ ಮಿತಿಯೊಳಗೆ ಸಾರ್ವಜನಿಕರ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆ ಆರಂಭದಲ್ಲೇ ಪ್ರತಿಪಕ್ಷದ ನಾಯಕ ರಮೇಶ್ ಹೆಗ್ಡೆ ಈ ಕುರಿತು ವಿಷಯ ಪ್ರಸ್ತಾಪಿಸಿ, ಪಾಲಿಕೆ ಆಡಳಿತ ನಿಷ್ಕ್ರಿಯವಾಗಿದೆ. ಸಾರ್ವಜನಿಕರ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆ. ಎಲ್ಲಾ ಅಧಿಕಾರಿಗಳಲ್ಲಿ 3200 ಕಡತಗಳು ಬಾಕಿ ಇದ್ದು, ಸಾರ್ವಜನಿಕರು ಪಾಲಿಕೆಗೆ ನಿತ್ಯ ಅಲೆದಾಡುತ್ತಿದ್ದಾರೆ ಎಂದು ದೂರಿದರು. ಪೌತಿಖಾತೆ, ತೆರಿಗೆ ನಿರ್ಧಾರಣೆ, ಪರವಾನಿಗೆ ನೀಡುವುದು ಸೇರಿದಂತೆ ಯಾವುದೇ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ ಎಂದು ಆರೋಪಿಸಿದರು.

ಸದಸ್ಯ ನಾಗರಾಜ್ ಕಂಕಾರಿ ಮಾತನಾಡಿ, ಪಾಲಿಕೆ ಆಯುಕ್ತರು ನಗರಕ್ಕೆ ಬಂದು 1 ತಿಂಗಳಾಗಿದೆ. ಅವರು ಸಹ ಒಂದು ಅರ್ಜಿ ವಿಲೇವಾರಿ ಮಾಡಿಲ್ಲ. ಕೆಲ ಅಧಿಕಾರಿಗಳು ಕಚೇರಿ ಅವಧಿ ಬಿಟ್ಟು ಸಂಜೆ ಪಾಲಿಕೆಗೆ ಬಂದು ಕೂರುತ್ತಾರೆ. ಹೀಗಾದರೆ ಜನರ ಕೆಲಸ ಹೇಗೆ ಆಗುತ್ತದೆ ಎಂದು ಆರೋಪಿಸಿದ್ದಾರೆ

ABOUT THE AUTHOR

...view details