ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಗಾಂಧಿ ಪಾರ್ಕ್ ನಗರದ ಅತ್ಯಂತ ದೊಡ್ಡ ಉದ್ಯಾನವನವೆಂಬ ಖ್ಯಾತಿ ಪಡೆದಿದೆ. ಆದರೆ, ಅದರೊಳಗಡೆ ಹೋದರೆ ಸಮಸ್ಯೆಗಳ ಸರಮಾಲೆಗಳೇ ಎಲ್ಲರ ಕಣ್ಣಿಗೆ ಗೋಚರಿಸುತ್ತವೆ.
ಗಾಂಧಿ ಪಾರ್ಕ್‌ನಲ್ಲಿ ಅವ್ಯವಸ್ಥೆ ಸರಿಯಾದ ನಿರ್ವಹಣೆಯ ಕೊರೆಯಿರುವ ಗಾಂಧಿ ಪಾರ್ಕಿನ ಒಳಗಡೆ ಹೋದರೆ ಅವ್ಯವಸ್ಥೆ ಕಾಣಿಸುತ್ತೆ. ಗಾಂಧಿ ಹೆಸರಿಗೆ ಈಉದ್ಯಾನವನ ಒಂದ್ರೀತಿ ಕಳಂಕವೆಂಬತಿದೆ. ಮೂಲಸೌಕರ್ಯವೇ ಇಲ್ಲದೆ ಜನ ಈ ಕಡೆ ಮುಖ ಮಾಡಲ್ಲ.
ಈ ಉದ್ಯನವನದಲ್ಲಿರುವ ಕಾರಂಜಿ ಕೊಳದ ಒಳಗಡೆ ಹಾಳಾಗಿರುವ ಪೈಪ್ಗಳಿವೆ. ಬೀದಿ ದೀಪ ಸೇರಿ ಮಕ್ಕಳ ಮನೋರಂಜನೆಗಾಗಿರುವ ಯಾವ ಸಲಕರಣೆಗಳೂ ಇಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಹೀಗೆ ಹತ್ತಾರು ಸಮಸ್ಯೆಗಳ ತಾಣ ಈ ಉದ್ಯಾನವನ.ಇಷ್ಟೆಲ್ಲ ಆದರೂ ಕೂಡ ಮಹಾನಗರ ಪಾಲಿಕೆ ಈ ಕಡೆ ತಲೆ ಕೂಡ ಹಾಕಿಲ್ಲ. ನಿತ್ಯ ಪಾರ್ಕ್ಗೆ ಬರುವ ನೂರಾರು ಜನರಿಂದ ತಲಾ ಹತ್ತು ರೂ. ಫೀ ಪಡೆಯುವ ಗುತ್ತಿಗೆದಾರರು ಇದರ ನಿರ್ವಹಣೆ ಮಾತ್ರ ಮಾಡೋದಿಲ್ಲ.
ಉದ್ಯಾನವನ ಅಭಿವೃದ್ಧಿಗಾಗಿಯೇ 3 ವರ್ಷಕ್ಕೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತೆ. ಅದರಿಂದ ಲಕ್ಷಾಂತರ ರೂ. ಕೂಡ ಬಿಡುಗಡೆಯಾಗಿದೆ. ಆದರೆ, ಪಾಲಿಕೆ ಮಾತ್ರ ಆ ಹಣವನ್ನ ಗಾಂಧಿ ಪಾರ್ಕಿನ ಅಭಿವೃದ್ಧಿಗೆ ಬಳಸದೇ ಏನು ಮಾಡುತ್ತಿದೆ ಎನ್ನುವುದೇ ಸಾರ್ವಜನಿಕರ ಪ್ರಶ್ನೆ.