ಕರ್ನಾಟಕ

karnataka

ETV Bharat / state

ಚಿಕನ್, ಮಟನ್ ತಾಜ್ಯವಸ್ತುಗಳ ವಿಲೇವಾರಿಗೆ ಸಂಘ ರಚಿಸಿ: ಮಹಾನಗರ ಪಾಲಿಕೆ ಸೂಚನೆ - ಶಿವಮೊಗ್ಗ

ಶಿವಮೊಗ್ಗದ ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಆರ್.ಸಿ.ನಾಯಕ್ ನೇತೃತ್ವದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚಿಕನ್ ಮತ್ತು ಮಟನ್ ತಾಜ್ಯವಸ್ತುಗಳ ವಿಲೇವಾರಿಗೆ ಸಂಘ ರಚಿಸುವಂತೆ ಸೂಚಿಸಲಾಯಿತು.

Metropolitan Health Standing Committee Meeting
ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ವತಿಯಿಂದ ಸಭೆ

By

Published : Jun 10, 2020, 5:32 PM IST

ಶಿವಮೊಗ್ಗ:ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ವತಿಯಿಂದ ಇಂದು ಪಾಲಿಕೆ ವ್ಯಾಪ್ತಿಯ ಚಿಕನ್ ಮತ್ತು ಮಟನ್ ಅಂಗಡಿಗಳ ಮಾಲೀಕರ ಸಭೆ ನಡೆಸಲಾಯಿತು.

ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಸಭೆ

ಸಭೆಯಲ್ಲಿ ಮಾಂಸ ಮಾರಾಟದ ದರ ನಿಗದಿ, ತ್ಯಾಜ್ಯ ವಿಲೇವಾರಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಆರ್.ಸಿ.ನಾಯಕ್ ನೇತೃತ್ವದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಚಿಕನ್ ಮತ್ತು ಮಟನ್ ತಾಜ್ಯವಸ್ತುಗಳ ವಿಲೇವಾರಿಗೆ ಸಂಘ ರಚಿಸುವಂತೆ ಸೂಚಿಸಲಾಯಿತು.

ಸಂಘ ರಚಿಸಿಕೊಂಡ ನಂತರ ವ್ಯಾಪಾರದ ಪರವಾನಗಿ ಪಡೆದುಕೊಳ್ಳಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಲ್ಲದೇ ತಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಸಂಘದ ವತಿಯಿಂದಲೇ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿ 140 ಚಿಕನ್ ಮತ್ತು ಮಟನ್ ಅಂಗಡಿಗಳಿದ್ದು, ಅಗತ್ಯವಿದ್ದಷ್ಟು ವಲಯಗಳನ್ನು ರಚಿಸಿಕೊಂಡು ತ್ಯಾಜ್ಯ ವಿಲೇವಾರಿ ಮಾಡಬೇಕು. ಮಾರಾಟಗಾರರು ಯಾವುದೇ ಕಾರಣಕ್ಕೂ ಗ್ರಾಹಕರುಗಳಿಗೆ ಪ್ಲಾಸ್ಟಿಕ್ ಚೀಲದಲ್ಲಿ ಮಾಂಸ ನೀಡಬಾರದು. ಶಿವಮೊಗ್ಗ ಪ್ಲಾಸ್ಟಿಕ್‌ ಮುಕ್ತ ನಗರವಾಗಿದೆ. ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಬಟ್ಟೆ ಬ್ಯಾಗ್ ಬಳಸುವಂತೆ ಸಲಹೆ ನೀಡಲಾಗಿದೆ.

ABOUT THE AUTHOR

...view details