ಕರ್ನಾಟಕ

karnataka

ETV Bharat / state

ಶಿವಮೊಗ್ಗ: ನೋಡುಗರ ಕಣ್ಮನ ಸೆಳೆದ ಕೆರೆ ಬೇಟೆ ಹಬ್ಬ - ನೋಡುಗರ ಕಣ್ಮನ ಸೆಳೆದ ಕೆರೆಬೇಟೆ ಹಬ್ಬ

ಎರಡು ವರ್ಷದ ಹಿಂದೆ ಕೆರೆಯಲ್ಲಿ ಬಿಟ್ಟಿದ್ದ ಮೀನುಗಳನ್ನು ಕೆರೆ ಬೇಟೆ ಮೂಲಕ ಜನರು ಹಿಡಿಯುತ್ತಾರೆ. ಈ ಕೆರೆ ಬೇಟೆ ನೋಡಲು 5 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಇದರಿಂದ ಚನ್ನಶೆಟ್ಟಿಕೊಪ್ಪ ಗ್ರಾಮಕ್ಕೆ 14 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ. ಕೆರೆ ಬೇಟೆಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ..

ಕೆರೆಬೇಟೆ ಹಬ್ಬ
ಕೆರೆಬೇಟೆ ಹಬ್ಬ

By

Published : Apr 11, 2022, 4:46 PM IST

ಶಿವಮೊಗ್ಗ :ಮಲೆನಾಡಿನ ಇತಿಹಾಸ ಪ್ರಸಿದ್ಧ ಕೆರೆ ಹಬ್ಬವು ಶಿವಮೊಗ್ಗ ಜಿಲ್ಲೆ‌ ಸಾಗರ ತಾಲೂಕಿನ ಚನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆಯಿತು. ಚೆನ್ನಮ್ಮಾಜಿ ಕೆರೆಯಲ್ಲಿ ನಡೆದ ಕೆರೆ ಬೇಟೆಯಲ್ಲಿ ಮೀನು ಬೇಟೆಗಾಗಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಏಕ ಕಾಲಕ್ಕೆ ಕೆರೆಗೆ ಇಳಿದು ಕೂಣಿಗಳ ಮೂಲಕ ಮೀನು ಬೇಟೆ ಮಾಡಲಾಯಿತು.

ಚೆನ್ನಮ್ಮಾಜಿ ಕೆರೆಯಲ್ಲಿ ನಡೆದ ಕೆರೆ ಬೇಟೆ..

ಒಂದು ಕೂಣಿಗೆ 700 ರೂಪಾಯಿ ದರವನ್ನು ಗ್ರಾಮಸ್ಥರು ನಿಗದಿ ಪಡಿಸಿದ್ದರು. ಬೇಸಿಗೆಯಲ್ಲಿ ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಆರಂಭಗೊಳ್ಳುವ ಈ ಕೆರೆ ಬೇಟೆಯು ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಎರಡು ವರ್ಷದ ಹಿಂದೆ ಕೆರೆಯಲ್ಲಿ ಬಿಟ್ಟಿದ್ದ ಮೀನುಗಳನ್ನು ಕೆರೆ ಬೇಟೆ ಮೂಲಕ ಜನರು ಹಿಡಿಯುತ್ತಾರೆ. ಈ ಕೆರೆ ಬೇಟೆ ನೋಡಲು 5 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಇದರಿಂದ ಚನ್ನಶೆಟ್ಟಿಕೊಪ್ಪ ಗ್ರಾಮಕ್ಕೆ 14 ಲಕ್ಷಕ್ಕೂ ಹೆಚ್ಚು ಆದಾಯ ಬಂದಿದೆ. ಕೆರೆ ಬೇಟೆಯ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಇದನ್ನೂ ಓದಿ:ವಾಹನ ಅಪಘಾತ : ಸಂಸದ ಸಂಗಣ್ಣ ಕರಡಿ ಸಹೋದರ ಸ್ಥಳದಲ್ಲಿಯೇ ಸಾವು

ABOUT THE AUTHOR

...view details