ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಫಾರೆಸ್ಟ್​​ ಅಧಿಕಾರಿಯಿಂದಲೇ ಅಕ್ರಮ ಬೀಟೆ ಮರ ಸಾಗಾಟ! - Forest Officer

ಬೇಲಿಯೇ ಎದ್ದು ಹೊಲ‌ ಮೇಯಿತು ಎಂಬ ಗಾದೆ ಮಾತಿನಂತಾಗಿದೆ ಶಿವಮೊಗ್ಗದ ಸಿರಿಗೆರೆ ವಲಯ ಅರಣ್ಯಾಧಿಕಾರಿಗಳ ಕಥೆ. ತಪ್ಪು ಮಾಡಿದ ಅಧಿಕಾರಿಗೆ ಶಿಕ್ಷೆ ನೀಡುವ ಬದಲು ಸುಳ್ಳು ಕೇಸ್​ ದಾಖಲಿ, ಆತನನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ.

ಬೀಟೆ ಮರದ ತುಂಡುಗಳು
ಬೀಟೆ ಮರದ ತುಂಡುಗಳು

By

Published : Aug 2, 2020, 6:26 PM IST

ಶಿವಮೊಗ್ಗ:ಫಾರೆಸ್ಟ್​​ ಅಧಿಕಾರಿ​ಯೊಬ್ಬರು ಅಕ್ರಮವಾಗಿ ಬೀಟೆ ಮರ ಸಾಗಾಣೆ ಮಾಡಿ ಮನೆಯಲ್ಲಿಟ್ಟುಕೊಂಡಿದ್ದರು. ಆದ್ರೆ ಮೇಲಾಧಿಕಾರಿಗಳು ಕ್ರಮ ತೆಗೆದು‌ ಕೊಳ್ಳುವುದನ್ನು ಬಿಟ್ಟು ಅಧಿಕಾರಿ ವಸಂತ ಅವರ ಮನೆಯಲ್ಲಿ ಸಿಕ್ಕ ತುಂಡಗಳು‌ ಗಾಳಿ- ಮಳೆಗೆ ಬಿದ್ದ ಮರಗಳೆಂದು ಸುಳ್ಳು ಕೇಸ್​ ದಾಖಲಿಸಿದ್ದಾರೆ.

ಫಾರೆಸ್ಟ್​​ ಅಧಿಕಾರಿಯಿಂದಲೇ ಅಕ್ರಮ ಬೀಟೆ ಮರ ಸಾಗಾಟ

ಕಳೆದ ಎರಡು ದಿನದ ಹಿಂದೆ ಕುಂಸಿಯ ಫಾರೆಸ್ಟರ್ ವಸಂತ ಅರಣ್ಯದಲ್ಲಿ ಸಿಕ್ಕ‌ ಬೀಟೆ ಮರದ ತುಂಡುಗಳನ್ನು ಡಿಪೋಗೆ ಸಾಗಿಸದೆ ತಮ್ಮ ಮನೆಯಲ್ಲಿಟ್ಟು ಕೊಂಡಿದ್ದರು. ನಂತರ ಮೇಲಾಧಿಕಾರಿಗಳಿಗೆ ವಿಷಯ ತಿಳಿದ ತಕ್ಷಣ ಮರವನ್ನು ಟ್ರಾಕ್ಟರ್​ನಲ್ಲಿ ಆಯನೂರಿನ ಅರಣ್ಯ ಡಿಪೋಗೆ ತಂದು ಹಾಕಿದ್ದಾರೆ.

ಬೀಟೆ ಮರದ ತುಂಡುಗಳು

ಆದರೆ ವಸಂತ ಅವರು ಓರ್ವ ಅಧಿಕಾರಿಯಾಗಿ ಮರದ ತುಂಡುಗಳನ್ನು ಇಲಾಖೆಯ ಗಮನಕ್ಕೆ ತರದೆ ಮನೆಯಲ್ಲಿ ಇಟ್ಟುಕೊಂಡಿದ್ದು ಅಪರಾಧ. ಲಕ್ಷಾಂತರ ರೂ. ಬೆಲೆ ಬಾಳುವ ಮರವನ್ನು ಅಕ್ರಮವಾಗಿ ಮನೆಯಲ್ಲಿಟ್ಟು‌ಕೊಂಡಿದ್ದ ವಸಂತ ಅವರ ಮೇಲೆ ಯಾವುದೇ ಕ್ರಮ ತೆಗೆದು‌ಕೊಳ್ಳದೇ, ‌ಅರಣ್ಯದಲ್ಲಿ ಗಾಳಿ- ಮಳೆಗೆ ಬಿದ್ದ ಮರವೆಂದು ಸುಳ್ಳು ಕೇಸ್​ ದಾಖಲಿಸಿದ್ದಾರೆ.

ABOUT THE AUTHOR

...view details