ಕರ್ನಾಟಕ

karnataka

ETV Bharat / state

ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ: ಕುಣಿದು ಕುಪ್ಪಣಿಸಿದ ಯುವ ಜನತೆ - ಗಣೇಶನ ಉತ್ಸವ ಮೂರ್ತಿಯ ಮೆರವಣಿಗೆ ಪ್ರಾರಂಭ

ಶಿವಮೊಗ್ಗದ ಗಲಾಟೆ ಗಣಪತಿ ಎಂದೇ ಖ್ಯಾತಿಯಾಗಿರುವ ಹಿಂದೂ ಮಹಾಸಭಾ ಗಣಪತಿ ಈ ಬಾರಿ 75ನೇ ವರ್ಷದಾಗಿದ್ದು, ಇಂದು ರಾಜಬೀದಿ ಉತ್ಸವದ ಮೂಲಕ ಮೆರವಣಿಗೆ ನಡೆಯುತ್ತಿದೆ. ಈ ಮೆರವಣಿಗೆಯಲ್ಲಿ ಅಪಾರಜನಸ್ತೋಮ ಸೇರಿದ್ದು, ಯುವಜನರು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದಾರೆ.

ಹಿಂದೂ ಮಹಾಸಭಾ ಗಣಪತಿ

By

Published : Sep 12, 2019, 7:31 PM IST

ಶಿವಮೊಗ್ಗ:ಗಲಾಟೆ ಗಣಪ ಎಂದೇ ಖ್ಯಾತಿ ಪಡೆದಿರುವ ಹಿಂದೂ ಸಂಘಟನಾ ಮಹಾ ಮಂಡಲದ ಗಣಪತಿ ರಾಜಬೀದಿ ಉತ್ಸವದ ಮೆರವಣಿಗೆ ತುಂಗಾ ನದಿ ತೀರದ ಭೀಮೇಶ್ವರ ದೇವಾಲಯದಿಂದ ಪ್ರಾರಂಭವಾಗಿದೆ.

ಮಹಾಮಂಗಳಾರತಿ ನೇರವೇರಿಸಿದ ನಂತರ ಗಣೇಶನ ಉತ್ಸವ ಮೂರ್ತಿಯ ಮೆರವಣಿಗೆ ಪ್ರಾರಂಭವಾಗಿದ್ದು, ನಂತರ ಎಸ್.ಪಿ.ಎಂ ರಸ್ತೆಯ ಮೂಲಕ ಗಾಂಧಿ ಬಜಾರ್​​ನ ಕಡೆ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಡೊಳ್ಳು, ವೀರಗಾಸೆ, ಚಂಡೆ, ಮದ್ದಳೆ, ನಾದಸ್ವರ, ವೇಷಧಾರಿಗಳು ಹೀಗೆ ಹಲವು ಕಲಾತಂಡಗಳು ಭಾಗಿಯಾಗಿದ್ದವು. ಕಲಾ ತಂಡಗಳು ಹಾಕುತ್ತಿದ್ದ ತಾಳಕ್ಕೆ ಯುವಕ-ಯುವತಿಯರು, ಪುರುಷರು-ಮಹಿಳೆಯರು, ಮಕ್ಕಳು ಹೀಗೆ ಎಲ್ಲರು ಡ್ಯಾನ್ಸ್ ಮಾಡುತ್ತಾ ಮೆರವಣಿಗೆಯಲ್ಲಿ ಸಾಗುತ್ತಿದ್ದು, ಇವರುಗಳ ಡ್ಯಾನ್ಸ್ ನೋಡಲು ಜನ ಮುಗಿಬೀಳುತ್ತಿದ್ದರು. ಮೆರವಣಿಗೆಯಲ್ಲಿ ಹಲವು ಸಂಘಗಳು ಗಣೇಶನ ಮೂರ್ತಿಗೆ ಭಾರಿ ಗಾತ್ರದ ಹಾರವನ್ನು ಹಾಕಿದರು.

ಹಿಂದೂ ಮಹಾಸಭಾ ಗಣಪತಿ

ಮೆರವಣಿಗೆಯಲ್ಲಿ ಪ್ರಸಾದ ವಿತರಣೆ: ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ‌ ಸಾಗುವ ದಾರಿಯಲ್ಲಿ ಹಲವು ಸಂಘ-ಸಂಸ್ಥೆಗಳು ಪ್ರಸಾದ ವಿತರಣೆ ಮಾಡಿದವು. ಎಸ್.ಪಿ.ಎಂ‌ ರಸ್ತೆಯಲ್ಲಿ ಜೈನ್ ಸಮಾಜದವರು ಪುಳಿಯೋಗರೆ, ಬೊಂಡಾ, ಮೈಸೂರು ಪಾಕ್ ಹೀಗೆ ಗಾಂಧಿ ಬಜಾರ್​​ನಲ್ಲಿ ಕ್ರಾಸ್​​​ಗೊಂದರಂತೆ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಅಲ್ಲದೆ ಕುಡಿಯುವ ನೀರನ್ನು ವಿತರಿಸಲಾಗುತ್ತಿತ್ತು. ಮೆರವಣಿಗೆಯಲ್ಲಿ ಉಪ ಮೇಯರ್ ಚನ್ನಬಸಪ್ಪ ಸೇರಿದಂತೆ ಹಲವು ಹಿಂದೂ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು.

ಪೊಲೀಸ್ ಬಿಗಿ ಬಂದೋ ಬಸ್ತ್:ಗಣಪತಿ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ಮೆರವಣಿಗೆ ಸೇರಿದಂತೆ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ನಗರದ ತುಂಬೆಲ್ಲಾ ನಾಕಾಬಂದಿ ಹಾಕಲಾಗಿದೆ. ನಗರದಲ್ಲಿ ಕೆಲವು ಕಡೆ ರಸ್ತೆ ಮಾರ್ಗವನ್ನು ಬದಲಾಯಿಸಲಾಗಿದೆ. ಎಸ್ಪಿ ಶಾಂತರಾಜು ಹಾಗೂ ಎಎಸ್ಪಿ ಡಾ. ಶೇಖರ್ ರವರ ನೇತೃತ್ವದಲ್ಲಿ ಸುಮಾರು 4.500 ಪೊಲೀಸರನ್ನು ನೇಮಿಸಲಾಗಿದೆ.

ABOUT THE AUTHOR

...view details