ಶಿವಮೊಗ್ಗ:ಆರು ಮಂದಿ ಕಾರ್ಮಿಕರನ್ನ ಬಲಿ ಪಡೆದಿದ್ದ ಹುಣಸೋಡು ಸ್ಫೋಟ ಪ್ರಕರಣಕ್ಕೆ ಕಾರಣವಾದ ಆರೋಪ ಹೊತ್ತಿರುವ ಕ್ರಷರ್ ಪರವಾನಿಗೆ ರದ್ದುಗೊಳಿಸಿ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಹುಣಸೋಡು ಕ್ರಷರ್ ಪರವಾನಿಗೆ ರದ್ದುಗೊಳಿಸಿ ಜಿಲ್ಲಾಧಿಕಾರಿಗಳ ಆದೇಶ.. - District Collector KB Shivakumar ordered
ಕ್ವಾರಿಯಲ್ಲಿ ಕಲ್ಲು ಒಡೆಯಲು ಸ್ಫೋಟಕ ತಂದಿದ್ದಾಗ ಒಮ್ಮೆಲೆ ಸ್ಫೋಟಗೊಂಡು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನೆಲೆ ಕ್ರಷರ್‌ನ ಪರವಾನಿಗೆಯನ್ನೇ ರದ್ದುಗೊಳಿಸಲಾಗಿದೆ..
ಹುಣಸೋಡು ಕ್ರಷರ್ ಪರವಾನಗಿ ರದ್ದು, ಡಿಸಿ ಆದೇಶ...
ಕಲ್ಲಗಂಗೂರು ಗ್ರಾಮದ ಸರ್ವೇ ನಂಬರ್ 2ರಲ್ಲಿದ್ದ ಎಸ್ ಎಸ್ ಸ್ಟೋನ್ ಕ್ರಷರ್‌ನ ಪರವಾನಿಗೆ ರದ್ದುಗೊಳಿಸಲಾಗಿದೆ. ಹಿಂದೆ ಸುಧಾಕರ್ ಎಂಬುವರಿಗೆ ಕ್ರಷರ್ ನಡೆಸಲು ಪರವಾನಿಗೆ ನೀಡಲಾಗಿತ್ತು. ಆದರೆ, ಕ್ರಷರ್ ಪಕ್ಕದಲ್ಲೇ ಕಲ್ಲು ಕ್ವಾರಿ ನಡೆಸುತ್ತಿದ್ದರು.
ಕ್ವಾರಿಯಲ್ಲಿ ಕಲ್ಲು ಒಡೆಯಲು ಸ್ಫೋಟಕ ತಂದಿದ್ದಾಗ ಒಮ್ಮೆಲೆ ಸ್ಫೋಟಗೊಂಡು ಆರು ಮಂದಿ ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನೆಲೆ ಕ್ರಷರ್‌ನ ಪರವಾನಿಗೆಯನ್ನೇ ರದ್ದುಗೊಳಿಸಲಾಗಿದೆ.