ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಇಂದು 258 ಜನ ಸೋಂಕಿತರು ಪತ್ತೆ: 196 ಮಂದಿ ಗುಣಮುಖ - ಶಿವಮೊಗ್ಗ ಕೊರೊನಾ ಪಾಸಿಟಿವ್

ಶಿವಮೊಗ್ಗದಲ್ಲಿ ಇಂದು 258 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಇದುವರೆಗೂ 14,434 ಜನ ಗುಣಮುಖರಾಗಿದ್ದಾರೆ.

Shimoga
ಶಿವಮೊಗ್ಗ

By

Published : Oct 7, 2020, 9:13 PM IST

ಶಿವಮೊಗ್ಗ:ಜಿಲ್ಲೆಯಲ್ಲಿ ಇಂದು 258 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 16,702 ಕ್ಕೆ ಏರಿಕೆಯಾಗಿದೆ.

ಇಂದು 196 ಜನ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 14,434 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿಂದು ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೂ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ.

ಸದ್ಯ ಜಿಲ್ಲೆಯಲ್ಲಿ 1,973 ಜನ ಚಿಕಿತ್ಸೆಯಲ್ಲಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 140 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್​ನಲ್ಲಿ 115 ಜನ ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 260 ಜನ ಇದ್ದಾರೆ. ಮನೆಯಲ್ಲಿ 1,336 ಜನ ಐಸೋಲೇಷನ್​ನಲ್ಲಿದ್ದಾರೆ. ಆರ್ಯುವೇದ ಕಾಲೇಜಿನಲ್ಲಿ 122 ಸೋಂಕಿತರಿದ್ದಾರೆ.

ಜಿಲ್ಲೆಯಲ್ಲಿ ಕಂಟೇನ್ಮೆಂಟ್ ಜೋನ್ ಸಂಖ್ಯೆ 677ಕ್ಕೆ ಏರಿದೆ. ಇದರಲ್ಲಿ‌ 3,978 ಜೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ:

ಶಿವಮೊಗ್ಗ-132

ಭದ್ರಾವತಿ-40

ಶಿಕಾರಿಪುರ-23

ತೀರ್ಥಹಳ್ಳಿ-15

ಸೊರಬ-13

ಸಾಗರ-14

ಹೊಸನಗರ-14

ಹಾಗೂ ಬೇರೆ ಜಿಲ್ಲೆಗಳಿಂದ 07 ಜನ ಸೊಂಕಿತರು ಆಗಮಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 4,356 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 3,217 ಜನರ ವರದಿ ಬಂದಿದೆ.

ABOUT THE AUTHOR

...view details