ಶಿವಮೊಗ್ಗ:ಬುಧವಾರ ಜಿಲ್ಲೆಯಲ್ಲಿ46 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 644ಕ್ಕೆ ಏರಿಕೆಯಾಗಿದೆ. ಬುಧವಾರ 5 ಜನ ಗುಣಮುಖರಾಗಿದ್ದು, ಈವರೆಗೆ 244 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಅಸ್ಪತ್ರೆಗಳಲ್ಲಿ 388 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬುಧವಾರ ಶಿವಮೊಗ್ಗದಲ್ಲಿ 46 ಹೊಸ ಪ್ರಕರಣ ಪತ್ತೆ: ಸ್ವಾಮೀಜಿ ಸೇರಿ 12 ಜನ ಸೋಂಕಿಗೆ ಬಲಿ! - ಶಿವಮೊಗ್ಗ ಕೋವಿಡ್ ಅಪ್ಡೇಟ್
ಬುಧವಾರ ಹೊನ್ನಾಳಿಯ ಹಾಲಸ್ವಾಮಿ ಮಠದ ಶ್ರೀಗಳು ಸೇರಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 12 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಒಟ್ಟು 46 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 644ಕ್ಕೆ ಏರಿಕೆಯಾಗಿದೆ.
ಬುಧವಾರ ಹೊನ್ನಾಳಿಯ ಹಾಲಸ್ವಾಮಿ ಮಠದ ಶ್ರೀಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 12 ಜನ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಐಸೋಲೇಷನ್ನಲ್ಲಿ 165 ಜನ, ಕೋವಿಡ್ ಕೇರ್ ಸೆಂಟರ್ನಲ್ಲಿ 211 ಜನ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 12 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಶಿವಮೊಗ್ಗದಲ್ಲಿ 37, ಭದ್ರಾವತಿಯಲ್ಲಿ 05, ಸಾಗರದಲ್ಲಿ 01 ಹಾಗೂ ಶಿಕಾರಿಪುರದಲ್ಲಿ 03 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 379 ಜನರ ಸ್ವ್ಯಾಬ್ ಪರೀಕ್ಷೆಗೆ ಪಡೆದುಕೊಳ್ಳಲಾಗಿದೆ. ಇದುವರೆಗೆ 22,220 ಜನರ ಸ್ವ್ಯಾಬ್ ಪಡೆಯಲಾಗಿದ್ದು, 20,511 ಜನರ ಫಲಿತಾಂಶ ಬಂದಿದೆ. ಜಿಲ್ಲೆಯಾದ್ಯಂತ 195 ಕಂಟೈನ್ಮೆಂಟ್ ಝೋನ್ಗಳನ್ನು ಗುರುತಿಸಲಾಗಿದೆ.
ಜಿಲ್ಲೆಯಲ್ಲಿ ಇಂದಿನಿಂದ ಅರ್ಧ ದಿನ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಬೆಳಿಗ್ಗೆ 5ರಿಂದ ಮಧ್ಯಾಹ್ನ 2 ಗಂಟೆ ತನಕ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದ್ದು, ಯಾರೂ ಮನೆಯಿಂದ ಹೊರ ಬಾರದಂತೆ ತಿಳಿಸಲಾಗಿದೆ. ಲಾಕ್ಡೌನ್ ನಿರ್ವಹಣೆಗೆ ಜಿಲ್ಲಾಡಳಿತಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದೆ.