ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 359 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 9,918 ಕ್ಕೆ ಏರಿಕೆಯಾಗಿದೆ. ಇಂದು 405 ಜನ ಗುಣಮುಖರಾಗಿದ್ದು, ಇದುವರೆಗೂ ಒಟ್ಟು 6,980 ಜನ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 8 ಜನ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವನ್ನಪ್ಪಿದ್ದವರ ಸಂಖ್ಯೆ 174ಕ್ಕೆ ಏರಿದೆ. ಸದ್ಯ ಜಿಲ್ಲೆಯಲ್ಲಿ 2,276 ಜನ ಚಿಕಿತ್ಸೆಯಲ್ಲಿದ್ದಾರೆ. ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 148, ಕೋವಿಡ್ ಕೇರ್ ಸೆಂಟರ್ ನಲ್ಲಿ 179, ಖಾಸಗಿ ಆಸ್ಪತ್ರೆಯಲ್ಲಿ 279 ಜನ ಸೋಂಕಿತರು ಇದ್ದಾರೆ. ಮನೆಯಲ್ಲಿ 1,432 ಜನ ಐಸೋಲೇಷನ್ ನಲ್ಲಿದ್ದಾರೆ. ಹಾಗೆ ಆರ್ಯುವೇದ ಕಾಲೇಜಿನಲ್ಲಿ 238 ಜನ ಇದ್ದಾರೆ.