ಕರ್ನಾಟಕ

karnataka

By

Published : Sep 7, 2020, 9:26 PM IST

ETV Bharat / state

ಶಿವಮೊಗ್ಗ ಜಿಲ್ಲೆಯಲ್ಲಿ 385 ಜನ ಸೋಂಕಿತರು ಪತ್ತೆ, 202 ಜನ ಗುಣಮುಖ

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 8 ಜನ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.

Shimoga
ಶಿವಮೊಗ್ಗ

ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 125 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,559 ಕ್ಕೆ ಏರಿಕೆಯಾಗಿದೆ. ಇಂದು 202 ಜನ ಗುಣಮುಖರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಇದುವರೆಗೂ 6,575 ಜನ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ ಇಂದು 8 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 166 ಜನ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2,330 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 153 ಜನ ಸೋಂಕಿತರಿದ್ದಾರೆ. ಕೋವಿಡ್ ಕೇರ್ ಸೆಂಟರ್ ನಲ್ಲಿ 191, ಖಾಸಗಿ ಆಸ್ಪತ್ರೆಯಲ್ಲಿ 283 ಮಂದಿ ಹಾಗೂ ಮನೆಯಲ್ಲಿ 1,428 ಜನ ಐಸೋಲೇಷನ್ ನಲ್ಲಿದ್ದಾರೆ. ಆಯುರ್ವೇದ ಕಾಲೇಜಿನಲ್ಲಿ 275 ಜನ ಇದ್ದಾರೆ.

ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಜೋನ್ ಸಂಖ್ಯೆ 4,337 ಏರಿಕೆಯಾಗಿದೆ. ಇದರಲ್ಲಿ‌ 1,445 ಜೋನ್ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ: ಶಿವಮೊಗ್ಗ-164, ಭದ್ರಾವತಿ-56, ಶಿಕಾರಿಪುರ-89, ತೀರ್ಥಹಳ್ಳಿ-15, ಸೊರಬ-20, ಸಾಗರ-18, ಹೊಸನಗರ-17 ಹಾಗೂ ಬೇರೆ ಜಿಲ್ಲೆಯಿಂದ 06 ಜನ ಸೋಂಕಿತರು ಆಗಮಿಸಿದ್ದಾರೆ. ಇಂದು ಜಿಲ್ಲೆಯಲ್ಲಿ 1,744 ಜನರ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 1,534 ಜನರ ವರದಿ ಬಂದಿದೆ.

ABOUT THE AUTHOR

...view details