ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಶಿಶು ವೈದ್ಯ ಸಂಘದಿಂದ 27ನೇ ವಿಶ್ವ ಸ್ತನಪಾನ ಸಪ್ತಾಹ - ಶಿವಮೊಗ್ಗ, ಭಾರತೀಯ ಶಿಶು ವೈದ್ಯಕೀಯ ಸಂಘ ಶಿವಮೊಗ್ಗ ಜಿಲ್ಲಾ ಘಟಕ, ವಿಶ್ವ ಸ್ತನಪಾನ ಸಪ್ತಾಹ, 27ನೇ ವಿಶ್ವ ಸ್ತನಪಾನ ಸಪ್ತಾಹ, ಕನ್ನಡ ವಾರ್ತೆ, ಈಟಿವಿ ಭಾರತ

ಸ್ತನಪಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ಶಿಶು ವೈದ್ಯ ಸಂಘ ಶಿವಮೊಗ್ಗ ಜಿಲ್ಲಾ ಘಟಕದಿಂದ 27ನೇ ವಿಶ್ವ ಸ್ತನಪಾನ ಸಪ್ತಾಹ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ: ಶಿಶು ವೈದ್ಯ ಸಂಘದಿಂದ 27ನೇ ವಿಶ್ವ ಸ್ತನಪಾನ ಸಪ್ತಾಹ

By

Published : Aug 2, 2019, 4:30 AM IST

ಶಿವಮೊಗ್ಗ: ಶಿಶು ವೈದ್ಯಕೀಯ ಸಂಸ್ಥೆ ವತಿಯಿಂದ ಆ. 1ರಿಂದ 7ರವರೆಗೆ 27ನೇ ವಿಶ್ವ ಸ್ತನ ಪಾನ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಶಿಶು ವೈದ್ಯಕೀಯ ಸಂಘ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ದೀಪಕ್ ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ವರ್ಷ ತಂದೆ-ತಾಯಿ ಹಾಗೂ ಕುಟುಂಬದವರನ್ನು ನಿರಂತರ ಪ್ರೋತ್ಸಾಹಿಸಿ "ಸ್ತನಪಾನವನ್ನು ಸದಾ ಸಫಲಗೊಳಿಸಿ" ಎಂಬ ಘೋಷ ವಾಕ್ಯದೊಂದಿಗೆ ಸಪ್ತಾಹವನ್ನು ಆಚರಿಸಲಾಗುತ್ತಿದೆ ಎಂದರು.

ಎದೆ ಹಾಲಿನ ಮಹತ್ವದ ಬಗ್ಗೆ ಜಗತ್ತಿನಾದ್ಯಂತ ಸಾಕಷ್ಟು ಚರ್ಚೆಗಳು, ಸಂಶೋಧನೆಗಳು ನಡೆದು ಶಿಶುವಿನ ಸಮಗ್ರ ಬೆಳವಣಿಗೆಗೆ ತಾಯಿಯ ಹಾಲಿಗಿಂತ ಸಮನಾದ ಯಾವುದೇ ಹಾಲು ಇಲ್ಲ ಎಂಬುದು ಸಾಬೀತಾಗಿದೆ. ಸ್ತನಪಾನವು ತಾಯಿಗೆ, ಮಗುವಿಗೆ ಕುಟುಂಬಕ್ಕೆ ಸಮಾಜಕ್ಕೆ ಹಾಗೂ ದೇಶದ ಆರೋಗ್ಯಾಭಿವೃದ್ಧಿಗೆ ಅತ್ಯುತ್ತಮ ಬಂಡವಾಳ ಎಂದು ಸಾಬೀತಾಗಿದೆ ಎಂದು ಡಾ. ದೀಪಕ್​ ಮಾಹಿತಿ ನೀಡಿದರು.

ಶಿವಮೊಗ್ಗ: ಶಿಶು ವೈದ್ಯ ಸಂಘದಿಂದ ಸ್ತನಪಾನ ಸಪ್ತಾಹ

ಜಾಗತಿಕ ಮಟ್ಟದಲ್ಲಿ ಸ್ತನಪಾನಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಪೋಷಕರಲ್ಲಿ ಬದಲಾವಣೆಯಾಗಬೇಕು, ಕುಟುಂಬದ ಸದಸ್ಯರು, ಸಂಬಂಧಿಕರು, ಸಹೋದ್ಯೋಗಿಗಳು ದುಡಿಯುವ ಮಹಿಳೆಗೆ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಎದೆ ಹಾಲು ಕುಡಿಯುವುದು ಮಗುವಿನ ಹಕ್ಕು. ಇದಕ್ಕಾಗಿ ಇಡೀ ಸಮಾಜ ಸಹಕರಿಸಬೇಕು, ತಾಯ್ತನದ ಅವಧಿಯಲ್ಲಿ ವೇತನ ಸಹಿತ ರಜೆ ನೀಡಬೇಕು. ಹುಟ್ಟಿದ ಮಗುವಿಗೆ ಆರು ತಿಂಗಳವರೆಗೆ ಎದೆಹಾಲು ಕುಡಿಸುವುದರಿಂದ ಮಗುವಿನ ಆರೋಗ್ಯ ಉತ್ತಮವಾಗಿರುತ್ತೆ. ಹಾಗಾಗಿ ಈ ಕುರಿತು ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಡಾ. ದೀಪಕ್​ ತಿಳಿಸಿದರು.

For All Latest Updates

ABOUT THE AUTHOR

...view details