ಶಿವಮೊಗ್ಗ:ಅಕ್ಕ- ಪಕ್ಕದ ಅಂಗಡಿಯವರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಕೊಲೆಯಾಗಿ ಅಂತ್ಯವಾಗಿರುವ ಘಟನೆ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ.
ಕುಷನ್ ಅಂಗಡಿಯವ ಸಾಫ್ಟ್ ಆಗಿರಲಿಲ್ಲ.. ಅಕ್ಕ ಪಕ್ಕದ ಅಂಗಡಿಯವರ ಜಗಳ ಭೀಕರ ಕೊಲೆಯಲ್ಲಿ ಅಂತ್ಯ - a young man Murder at Shimogga
ಅಕ್ಕ- ಪಕ್ಕದ ಅಂಗಡಿಯವರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ಕೊಲೆಯಾಗಿ ಅಂತ್ಯವಾಗಿರುವ ಘಟನೆ ಶಿಕಾರಿಪುರದ ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ.
ಯುವಕನ ಕೊಲೆ
ಶಿರಾಳಕೊಪ್ಪ ಪಟ್ಟಣದ ಜಯ ಕರ್ನಾಟಕ ರೈಸ್ ಕಾಂಪ್ಲೆಕ್ಸ್ ಬಳಿ ಮೆಕಾನಿಕ್ ಶಾಪ್ ನಡೆಸುತ್ತಿದ್ದ ಜಾಫರ್ (28) ಕೊಲೆಯಾದ ಯುವಕ. ಜಾಫರ್ನನ್ನು ಆತನ ಮೆಕಾನಿಕ್ ಶಾಪ್ ಪಕ್ಕದ ಕುಷನ್ ಅಂಗಡಿಯವ ಕತ್ತು ಕುಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಕೊಲೆ ಮಾಡಿದ ವ್ಯಕ್ತಿಯ ಹೆಸರು ಪತ್ತೆಯಾಗಿಲ್ಲ. ಘಟನಾ ಸ್ಥಳಕ್ಕೆ ಶಿರಾಳಕೊಪ್ಪ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗೆ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.