ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಕೊರೊನಾಗೆ ಇಂದು ಓರ್ವ ಬಲಿ.. ಅಂತ್ಯಕ್ರಿಯೆಗೆ ಸ್ಥಳೀಯರ ವಿರೋಧ - person died by Corona

ಶಿವಮೊಗ್ಗ ಜಿಲ್ಲೆಯಲ್ಲಿಂದು ಕೊರೊನಾಗೆ ಓರ್ವ ವ್ಯಕ್ತಿ ಬಲಿಯಾಗಿದ್ದು, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಕೋವಿಡ್-19 ಮಾರ್ಗಸೂಚಿಯಂತೆ ಇವರ ಅಂತ್ಯಕ್ರಿಯೆ ನಡೆಸಲು ರೋಟರಿ ಚಿತಗಾರಕ್ಕೆ ತೆಗೆದುಕೊಂಡು ಬಂದಾಗ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರು.

ಅಂತ್ಯಕ್ರಿಯೆಗೆ ಸ್ಥಳೀಯರ ವಿರೋಧ
ಅಂತ್ಯಕ್ರಿಯೆಗೆ ಸ್ಥಳೀಯರ ವಿರೋಧ

By

Published : Jul 9, 2020, 12:10 AM IST

ಶಿವಮೊಗ್ಗ:ಜಿಲ್ಲೆಯಲ್ಲಿಂದು ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ನಗರದ ರೋಟರಿ ಚಿತಾಗಾರದಲ್ಲಿ ನಡೆಸಲಾಯಿತು. ಆದ್ರೆ ಚಿತಾಗಾರಕ್ಕೆ ಶವವನ್ನು ತೆಗೆದುಕೊಂಡು ಬಂದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.

ಶಿವಮೊಗ್ಗದಲ್ಲಿ ಕೊರೊನಾಗೆ ಇಂದು ಓರ್ವ ಬಲಿ

ಕೋವಿಡ್-19ಗೆ ಜಿಲ್ಲೆಯಲ್ಲಿ ಇದುವರೆಗೂ ಆರು ಜನ ಬಲಿಯಾಗಿದ್ದಾರೆ. ಶಿವಮೊಗ್ಗ ರವಿವರ್ಮ ಬೀದಿಯ ರೋಗಿ-16647 ಇಂದು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇವರಲ್ಲಿ ಸೋಂಕು ಕಂಡುಬಂದ ಬಳಿಕ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ರಾತ್ರಿ ಚೆನ್ನಾಗಿಯೇ ಇದ್ದ 70 ವರ್ಷದ ವ್ಯಕ್ತಿ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕೋವಿಡ್-19 ಮಾರ್ಗಸೂಚಿಯಂತೆ ಇವರ ಅಂತ್ಯಕ್ರಿಯೆ ನಡೆಸಲು ರಾಜೀವ್​ ಗಾಂಧಿ ಬಡಾವಣೆ ಪಕ್ಕದ ರೋಟರಿ ಚಿತಾಗಾರಕ್ಕೆ ತೆಗೆದುಕೊಂಡು ಬಂದಾಗ ಸ್ಥಳೀಯರು ಕೊರೊನಾ ರೋಗಿಯನ್ನು ಇಲ್ಲಿಗೆ ಏಕೆ ತಂದಿದ್ದೀರಿ. ಬೇರೆ ಕಡೆ ಶವ ಸಂಸ್ಕಾರ ಮಾಡಬಹುದಾಗಿತ್ತು ಎಂದು ಆರೋಗ್ಯ ಇಲಾಖೆಯವರಿಗೆ ರಾಜೀವ್ ಗಾಂಧಿ ಬಡಾವಣೆಯವರು ತರಾಟೆಗೆ ತೆಗೆದುಕೊಂಡರು.

ABOUT THE AUTHOR

...view details