ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ 348 ಜನರು ಕೊರೊನಾದಿಂದ ಗುಣಮುಖ: ಐವರು ಸಾವು - 348 people cured from corona

ಶಿವಮೊಗ್ಗದಲ್ಲಿಂದು 163 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ 3,622 ಜನ ಗುಣಮುಖರಾಗಿದ್ದಾರೆ.

By

Published : Aug 25, 2020, 12:01 AM IST

ಶಿವಮೊಗ್ಗ:ಜಿಲ್ಲೆಯಲ್ಲಿ ಇಂದು 163 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,816ಕ್ಕೆ ಏರಿಕೆಯಾಗಿದೆ.

ಇಂದು 348 ಜನ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 3,622 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಐವರು ಸೇರಿದಂತೆ ಇದುವರೆಗೂ 102 ಜನ ಸಾವನ್ನಪ್ಪಿದ್ದಾರೆ. ಸದ್ಯ 1,915 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಗ್ಗಾನ್ ಕೋವಿಡ್ ಅಸ್ಪತ್ರೆಯಲ್ಲಿ 203 ಜನ, ಕೋವಿಡ್ ಕೇರ್ ಸೆಂಟರ್​ನಲ್ಲಿ 522 ಜನ, ಖಾಸಗಿ ಆಸ್ಪತ್ರೆಯಲ್ಲಿ 272 ಜನ ಹಾಗೂ ಮನೆಯಲ್ಲಿ 815 ಜನ ಐಸೋಲೇಷನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಯುರ್ವೇದಿಕ್ ಕಾಲೇಜಿನಲ್ಲಿ 103 ಜನ ಇದ್ದಾರೆ. ಕಂಟೇನ್​ಮೆಂಟ್​​ ಝೋನ್​​ಗಳ ಸಂಖ್ಯೆ 2,475 ಏರಿಕೆಯಾಗಿದ್ದು, ಇದರಲ್ಲಿ‌ 841 ಝೋನ್​​ಗಳು ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ವಿವರ:

ಶಿವಮೊಗ್ಗ-94

ಭದ್ರಾವತಿ-24

ಶಿಕಾರಿಪುರ-17

ತೀರ್ಥಹಳ್ಳಿ-08

ಸೊರಬ-04

ಸಾಗರ-08

ಬೇರೆ ಜಿಲ್ಲೆಯಿಂದ 08 ಜನ ಸೋಂಕಿತರು ಆಗಮಿಸಿದ್ದಾರೆ. ಜಿಲ್ಲೆಯಲ್ಲಿ ಇಂದು 1,302 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ABOUT THE AUTHOR

...view details