ಕರ್ನಾಟಕ

karnataka

ETV Bharat / state

ಪೂರ್ಣಗೊಳ್ಳದ ನಾಲಾ ಕಾಮಗಾರಿ : ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಪರದಾಟ

ಶಿವಮೊಗ್ಗ : ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಆವರಣ ಭಾರಿ ಆಳದ ಗುಂಡಿಗಳಿಂದ ಆವೃತವಾಗಿದ್ದು, ಕಾಲೇಜು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜು ಆವರಣದಲ್ಲಿ ಸುರಂಗ ಮಾರ್ಗದಲ್ಲಿ ಹಾದು ಹೋಗಿರುವ ತುಂಗಾ ಬಲದಂಡೆ ನಾಲೆಯ ಪಥ ಬದಲಾವಣೆಗಾಗಿ ನೂತನ ನಾಲೆ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

By

Published : Aug 1, 2019, 9:02 AM IST

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಪರದಾಟ

ಶಿವಮೊಗ್ಗ: ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನ ಆವರಣ ಭಾರಿ ಆಳದ ಗುಂಡಿಗಳಿಂದ ಆವೃತವಾಗಿದ್ದು, ಕಾಲೇಜು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಾಲೇಜು ಆವರಣದಲ್ಲಿ ಸುರಂಗ ಮಾರ್ಗದಲ್ಲಿ ಹಾದು ಹೋಗಿರುವ ತುಂಗಾ ಬಲದಂಡೆ ನಾಲೆಯ ಪಥ ಬದಲಾವಣೆಗಾಗಿ ನೂತನ ನಾಲೆ ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ಕಲಾ ಕಾಲೇಜು ಕಟ್ಟಡದ ಪಕ್ಕ ಮತ್ತು ಮುಂಭಾಗದಲ್ಲಿ ಸುಮಾರು 20 ಅಡಿ ಆಳದಲ್ಲಿ ನಾಲೆ ನಿರ್ಮಿಸಲಾಗುತ್ತಿದ್ದು. ಕಳೆದ ಎರಡು ವರ್ಷಗಳಿಂದ ಆಮೆ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯನ್ನು ಮಳೆಗಾಲದಲ್ಲೂ ಮುಂದುವರಿಸಿರುವುದರಿಂದ ಕಾಲೇಜು ಆವರಣ ಸಂಪೂರ್ಣ ಕೇಸರುಮಯವಾಗಿದೆ.

ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಪರದಾಟ

ಸುರಂಗ ನಾಲೆಗಾಗಿ ಆಳವಾದ ಕಾಲುವೆ ತೆಗೆದಿರುವುದರಿಂದ ಕುಸಿಯುವ ಭೀತಿಯಲ್ಲೇ ವಿದ್ಯಾರ್ಥಿಗಳು ದಿನ ದೂಡುತ್ತಿದ್ದಾರೆ. ಕಾಲೇಜಿನ ಆವರಣದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಇದರಿಂದಾಗಿ ಭಯದಲ್ಲೇ ಕಾಲೇಜಿಗೆ ಬರುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಇನ್ನು, ಗಾಜನೂರು ಜಲಾಶಯದಿಂದ ರೈತರ ಜಮೀನುಗಳಿಗೆ ನೀರು ಪೂರೈಸುವ ತುಂಗಾ ಬಲದಂಡೆ ನಾಲೆ ಸುಮಾರು 52 ಕಿ.ಮೀ ಉದ್ದವಿದೆ. ಪ್ರಸ್ತುತ ಸಹ್ಯಾದ್ರಿ ಕಾಲೇಜಿನ ಆವರಣ ದೊಳಗೆ 27 ನೇ ಕೀ. ಮೀ ಚೈನೇಜ್ ನಲ್ಲಿ ಸುರಂಗ ನಾಲೆ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದ್ದು, ಈಗಾಗಲೇ ಗುತ್ತಿಗೆದಾರರು ನಾಲೆಯ ಡೆಕ್ ಗೆ ಸ್ಲಾಬ್ ಹಾಕಿದ್ದಾರೆ.

ಶೀಘ್ರದಲ್ಲೇ ಡೆಕ್ ಒಳಗಿನ ಸೆಂಟರಿಂಗ್ ಶೀಟ್ ತೆಗೆದು ಕಾಮಗಾರಿ ಮುಗಿಸಲಿದ್ದಾರೆ. ನಾಲೆಯ ಪಥ ಬದಲಾವಣೆಯೇ ಈ ಸಮಸ್ಯೆಗೆ ಕಾರಣವಾಗಿದೆ. ಮೊದಲು ಯೋಜನೆಯಂತೆ ಕಾಮಗಾರಿ ಆರಂಭಿಸಿದ್ದರೆ ಕಾಲೇಜಿನ ಹಿಂಭಾಗದಲ್ಲಿನ ಕ್ರೀಡಾಂಗಣದ ಮೂಲಕವಾಗಿ ನಾಲೆ ಮೇಲ್ಭಾಗದಲ್ಲಿ ಹಾದು ಹೋಗುತ್ತಿತ್ತು. ಇದರಿಂದಾಗಿ ಬೇರೆಯ ಯೋಜನೆ ರೂಪಿಸಿ, ಸುರಂಗ ಮಾರ್ಗವಾಗಿ ನಾಲೆಯನ್ನು ಮಾಡಲಾಗಿದೆ. ಮಳೆಗಾಲವಾದ್ದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ.

ABOUT THE AUTHOR

...view details