ಶಿವಮೊಗ್ಗ :ನೋ ನೆಟ್ವರ್ಕ್, ನೋ ವೋಟಿಂಗ್ ಎಂಬ ಅಭಿಯಾನದ ಭಾಗವಾಗಿ ಇಂದು ಶರಾವತಿ ಮುಳುಗಡೆಯ ಸಂತ್ರಸ್ತರು ಕಟ್ಟಿನಕಾರು ಗ್ರಾಮದಿಂದ ಕೋಗಾರು ಗ್ರಾಮದವರೆಗೂ ಪಾದಯಾತ್ರೆ ನಡೆಸಿ ಮೊಬೈಲ್ ನೆಟ್ವರ್ಕ್ಗಾಗಿ ಆಗ್ರಹಿಸಿದರು.
ಕಟ್ಟಿನಕಾರು ಸೇರಿ ಸುತ್ತಮುತ್ತಲ ಗ್ರಾಮಗಳ ಸುಮಾರು 15 ಕಿ.ಮೀ ದೂರದಲ್ಲಿ ಯಾವುದೇ ಮೊಬೈಲ್ ಕಂಪನಿಯ ನೆಟ್ವರ್ಕ್ ಲಭ್ಯವಾಗುವುದಿಲ್ಲ. ಇದರಿಂದ ಈ ಭಾಗದ ಜನರಿಗೆ ಹೊರ ಜಗತ್ತಿನೊಂದಿಗೆ ಸಂಪರ್ಕವೇ ಇಲ್ಲದಂತಾಗಿದೆ. ಇದರಿಂದ ತಮಗೆ ಮೊಬೈಲ್ ನೆಟ್ವರ್ಕ್ ಸೌಲಭ್ಯ ವದಗಿಸಬೇಕೆಂದು ಆಗ್ರಹಿಸಿದರು.
ನೋ ನೆಟ್ ವರ್ಕ್, ನೋ ವೋಟಿಂಗ್ ಅಭಿಯಾನ :ಚನ್ನಗೊಂಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿನಕಾರು, ಕಾರಣಿ, ಹಾಳಸಸಿ ಭಾಗದ ಜನರು ಕಳೆದ ಆರು ತಿಂಗಳಿಂದ ಜನತೆ ಅಭಿಯಾನ ಆರಂಭಿಸಿದ್ದಾರೆ. ಗಾಂಧಿ ಜಯಂತಿ ಪ್ರಯುಕ್ತ ಪಾದಯಾತ್ರೆ, ರಸ್ತೆ ತಡೆ ನಡೆಸಿ ಕಟ್ಟಿನಕಾರು ಗ್ರಾಮದಿಂದ ಚನ್ನಗೊಂಡ ಗ್ರಾಮ ಪಂಚಾಯತ್‌ವರೆಗೆ ಪಾದಯಾತ್ರೆ ನಡೆಸಿದರು.