ಶಿವಮೊಗ್ಗ: ಸೈಯ್ಯದ್ ಯಾಸೀನ್ ಒಬ್ಬ ಒಳ್ಳೆಯ ಹುಡುಗ. ಆದರೆ, ಆತನ ತಲೆ ಕೆಡಿಸಲಾಗಿದೆ ಎಂದು ಶಂಕಿತ ಉಗ್ರ ಸಯ್ಯದ್ ಯಾಸೀನ್ ಅಜ್ಜ ಶಾಮೀರ್ ಖಾನ್ ವಿಷಾದ ವ್ಯಕ್ತಪಡಿಸಿದ್ದಾರೆ.
ಸಯ್ಯದ್ ಯಾಸೀನ್ ತಂದೆ ಅಯ್ಯೂಬ್ ಖಾನ್ ವೆಲ್ಡಿಂಗ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೆ ಮೂರು ಜನ ಮಕ್ಕಳು. ಯಾಸೀನ್ ಹಿರಿಯವ. ಈತನಿಗೆ ಓರ್ವ ತಮ್ಮ ಹಾಗೂ ತಂಗಿ ಇದ್ದಾರೆ. ಯಾಸೀನ್ ಚೆನ್ನಾಗಿ ಓದುತ್ತಿದ್ದ ಕಾರಣ ಆತನನ್ನು ಇಂಜಿನಿಯರಿಂಗ್ ಕಾಲೇಜಿಗೆ ಕಳುಹಿಸಲಾಗಿತ್ತು. ಈತ ಈಗಷ್ಟೇ ಇಂಜಿನಿಯರಿಂಗ್ ಮುಗಿಸಿದ್ದು, ಕಳೆದ 15 ದಿನಗಳ ಹಿಂದೆ ಮನೆಯಿಂದ ಸ್ನೇಹಿತರ ಜೊತೆ ಟೂರ್ಗೆಂದು ಹೋಗಿದ್ದ. ಆದರೆ, ಈಗ ಪೊಲೀಸರು ಬಂದು ಹೇಳಿದಾಗ ನಮಗೆ ಗಾಬರಿಯಾಗಿತ್ತು.