ಶಿವಮೊಗ್ಗ:ಸಕ್ರೆಬೈಲು ಆನೆ ಬಿಡಾರದ ಗಣೇಶ ಎಂಬ ಹೆಸರಿನ ಆನೆಯೊಂದು ಇಂದು ನಿಧನವಾಗಿದೆ. ಅನೆಯು ದಾವಣಗೆರೆಯ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರ ಮಾಲೀಕತ್ವಕ್ಕೆ ಒಳಪಟ್ಟಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿ ಈ ಆನೆಯನ್ನು ದಾವಣಗೆರೆಯಿಂದ ಸಕ್ರೆಬೈಲು ಆನೆ ಬಿಡಾರಕ್ಕೆ (2013-14 ರಲ್ಲಿ) ಬಂದಿತ್ತು.
ಅರ್ಥೈಟಿಸ್(arthritis) ಎಂಬ ಕಾಯಿಲೆಯಿಂದ ಬಳಲುತ್ತಿದ ಗಣೇಶ ಆನೆಯು ನಿಲ್ಲಲಾಗದೇ ಸಾಕಷ್ಟು ಸಮಸ್ಯೆ ಎದುರಿಸುತ್ತಿತ್ತು. ಇದರಿಂದಾಗಿ ಸಕ್ರೆಬೈಲು ಆನೆ ಬಿಡಾರದಲ್ಲಿ ಚಿಕಿತ್ಸೆ ಹಾಗೂ ಆರೈಕೆ ಮಾಡಲಾಗುತ್ತಿತ್ತು. ಕಳೆದ ಎಂಟು ವರ್ಷಗಳಿಂದ ಬಿಡಾರದಲ್ಲಿ ಚಿಕಿತ್ಸೆಯಿಂದ ಗುಣಮುಖವಾಗಿ ಓಡಾಡುವ ಮಟ್ಟದಲ್ಲಿತ್ತು.