ಶಿವಮೊಗ್ಗ:ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಅವರ ವರ್ಗಾವಣೆ ಸರ್ಕಾರದ ತೀರ್ಮಾನ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಷಡಾಕ್ಷರಿ ಅವರ ಮೇಲೆ ಕೆರೆ ಮಣ್ಣು ತೆಗೆದಿರುವ ಆರೋಪದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಇದನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಇದರ ಮೇಲೆ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದರು.
ನಾನು ಸರ್ಕಾರದಲ್ಲಿ ಇದ್ದೇನೆಯೇ ಇಲ್ಲವೋ ಅಂತಾ ಹೇಳುವುದಕ್ಕೆ ಆಗುತ್ತದೆಯೇ. ಅದೇನು ದೊಡ್ಡ ವಿಷಯವೇನಲ್ಲ ಎಂದರು. ಪರೀಕ್ಷೆ ಹಗರಣದಲ್ಲಿ ಆರ್ ಡಿ ಪಾಟೀಲ ಪರಾರಿಯಾಗಿರುವ ಕುರಿತು ಮಾತನಾಡಿದ ಅವರು, ಅವರ ಮೇಲೆ ಹಗರಣಗಳ ಆರೋಪ ಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಕೊನೆಗೆ ಕಾನೂನು ಗೆಲ್ಲಬೇಕು ಎಂದರು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅದೇ ನನ್ನ ಅಭಿಪ್ರಾಯ ಎಂದರು. ಕಿಯೋನಿಕ್ಸ್ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೇಳಿ ಬಂದಿದೆ. ಈ ಕುರಿತು ಬಿಜೆಪಿ ಅವರು ತನಿಖೆಗೆ ಆಗ್ರಹಿಸಿರುವ ಕುರಿತು ಪ್ರತಿಕ್ರಿಯಿಸಿ, ಆ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಆರೋಪ: ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲ್ಲ, ಉಸ್ತುವಾರಿ ಸಚಿವರು ಯಾರು ಗೊತ್ತಿಲ್ಲ ಎಂಬ ಗೋಪಾಲಕೃಷ್ಣ ಬೇಳೂರು ಅವರ ಆರೋಪಕ್ಕೆ ಅದಕ್ಕೆಲ್ಲ ನಾನು ಉತ್ತರ ಕೊಡಲ್ಲ ಎಂದು ಹೇಳಿದರು.