ಶಿವಮೊಗ್ಗ: ಸೆಪ್ಟಂಬರ್ 17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮ ದಿನಾಚರಣೆ. ಈ ವಾರವನ್ನು ‘ಸೇವಾ ವಾರ’ವೆಂದು ಬಿಜೆಪಿ ದೇಶದ್ಯಾಂತ ಆಚರಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಶಿಕಾರಿಪುರದ ಸಂತೆ ಮೈದಾನದ ಸ್ವಚ್ಚತಾ ಕಾರ್ಯ ನೆರವೇರಿಸಿದ್ರು.
‘ಸೇವಾ ವಾರ’: ಶಿಕಾರಿಪುರದಲ್ಲಿ ಪೊರಕೆ ಹಿಡಿದ ಸಂಸದ ಬಿ.ವೈ ರಾಘವೇಂದ್ರ - ಬಿವೈ ರಾಘವೇಂದ್ರ ಸುದ್ದಿ,
ಪ್ರಧಾನಮಂತ್ರಿ ನರೇಂದ್ರ ಮೋದಿರವರ ಜನ್ಮದಿನವನ್ನು ‘ಸೇವಾ ವಾರ’ ಎಂದು ಬಿಜೆಪಿ ಈ ವಾರವೆಲ್ಲಾ ಆಚರಿಸುತ್ತಿದೆ. ಅದರಂತೆ ಸಂಸದ ಬಿ.ವೈ ರಾಘವೇಂದ್ರ ಕಾರ್ಯಕರ್ತರ ಜೊತೆ ಸೇರಿ ಮಾರುಕಟ್ಟೆಯ ಕಸ ಗುಡಿಸಿ ಶುಚಿಗೊಳಿಸುವ ಕೆಲಸ ಮಾಡಿದ್ರು.
ಸೇವಾ ವಾರ
ಶಿಕಾರಿಪುರದಲ್ಲಿ ನಿನ್ನೆ ಸಂತೆ ನಡೆದಿದೆ. ಇದರಿಂದ ಸಂತೆ ಮೈದಾನದಲ್ಲಿ ಸಾಕಷ್ಟು ಕಸ ಇರುತ್ತದೆ. ಇದರಿಂದ ಸಂಸದರು ತಮ್ಮ ಕಾರ್ಯಕರ್ತರ ಜೊತೆ ಸೇರಿ ಪೊರಕೆ ಹಿಡಿದು ಕಸ ಗುಡಿಸಿ ಸಂತೆ ಮೈದಾನವನ್ನು ಶುಚಿಗೊಳಿಸಿದರು. ಈ ಮೂಲಕ ಅವರೆಲ್ಲರೂ ಪ್ರಧಾನಿ ಮೋದಿ ಜನ್ಮದಿನಕ್ಕೆ ಗೌರವ ಸೂಚಿಸಿದರು.
ಶಿಕಾರಿಪುರ ಪಟ್ಟಣದ ವಿವಿಧೆಡೆ ನಡೆದ ‘ಸೇವಾ ವಾರ’ದಲ್ಲಿ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.