ಶಿವಮೊಗ್ಗ :ರಾಗಿಗುಡ್ಡದಲ್ಲಿ ಭಾನುವಾರ ನಡೆದ ಅಹಿತಕರ ಘಟನೆಯಿಂದ 144 ಸೆಕ್ಷನ್ ಹಾಕಲಾಗಿದೆ. ಶಿವಮೊಗ್ಗ ನಗರಕ್ಕೆ ಸೆಕ್ಷನ್ ಅನ್ವಯ ಮಾಡುವುದು ಬೇಡ ಎಂದು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯ ಸಂಸ್ಥೆ ಅಧ್ಯಕ್ಷ ಗೋಪಿನಾಥ್ ಮತ್ತು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮನವಿ ಮಾಡಿದ್ದಾರೆ.
ರಾಗಿಗುಡ್ಡದಲ್ಲಿ ನಡೆದ ಘಟನೆಯಿಂದ ಪೊಲೀಸ್ ಇಲಾಖೆಯು ನಿಷೇಧಾಜ್ಞೆ ಜಾರಿ ಮಾಡಿದ್ದು ಸ್ವಾಗರ್ತವಾಗಿದೆ. ಆದರೆ ಅದೇ ಸೆಕ್ಷನ್ ಅನ್ನು ಇಡೀ ನಗರಕ್ಕೆ ವಿಸ್ತರಿಸಿರುವುದು ಖಂಡನೀಯವಾಗಿದೆ. ಸೆಕ್ಷನ್ ಇದೆ ಎಂದು ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ ತುಂಬ ನಷ್ಟ ಉಂಟಾಗುತ್ತಿದೆ ಎಂದಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ಗಾಂಧಿ ಬಜಾರ್ ನಲ್ಲಿ ವ್ಯಾಪಾರ ವಹಿವಾಟು ನಡೆದಿಲ್ಲ. ಈಗ ಮತ್ತೆ ಸೆಕ್ಷನ್ ಎಂದು ಹಾಕಿದರೆ ವ್ಯಾಪಾರಿಗಳು ಹೇಗೆ ವ್ಯಾಪಾರ ಮಾಡಬೇಕು ಗೋಪಿನಾಥ್ ಎಂದು ಪ್ರಶ್ನಿಸಿದರು. ಇದರಿಂದ ನಮ್ಮ ಕೈಗಾರಿಕಾ ಹಾಗೂ ವಾಣಿಜ್ಯ ಸಂಸ್ಥೆಯು ಎಸ್ಪಿ ಅವರಿಗೆ ನಗರ ಭಾಗದಲ್ಲಿ ಸೆಕ್ಷನ್ ಹಾಕುವುದನ್ನು ತೆಗೆದುಬೇಕೆಂದು ವಿನಂತಿಕೊಂಡರು. ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ವಸಂತ ಹೋಬಳಿದಾರ್ ಸೇರಿದಂತೆ ನಿರ್ದೇಶಕರುಗಳು ಹಾಜರಿದ್ದರು.
ಆಸ್ಪತ್ರೆಗೆ ಭೇಟಿ ಕೊಟ್ಟ ಬಿಜೆಪಿ ಮುಖಂಡರು :ಘಟನೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರನ್ನು ಸೋಮವಾರ ಬಿಜೆಪಿ ಹಿರಿಯ ನಾಯಕರಾದ ಕೆ ಎಸ್ ಈಶ್ವರಪ್ಪ, ಸಂಸದ ಬಿ ವೈ ರಾಘವೇಂದ್ರ ಸೇರಿದಂತೆ ಇತರರು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಸಂಸದ ರಾಘವೇಂದ್ರ ಹಾಗೂ ಶಾಸಕ ಚನ್ನಬಸಪ್ಪ ಅವರು ಎಸ್ಪಿ ಮಿಥುನ್ ಕುಮಾರ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಶಿವಮೊಗ್ಗ ನಗರದಾದ್ಯಂತ ಹಾಕಿರುವ ಸೆಕ್ಷನ್ ತೆರವು ಹಾಗೂ ರಾಗಿ ಗುಡ್ಡ ಗಲಾಟೆಯ ಕುರಿತು ಮಾಹಿತಿ ಪಡೆದುಕೊಂಡರು.