ಕರ್ನಾಟಕ

karnataka

ETV Bharat / state

ಭದ್ರಾವತಿಯಲ್ಲಿ ಮೂರು ದಿನ ಸೆಕ್ಷನ್ 144 ಜಾರಿ

ಕಬಡ್ಡಿ ಪಂದ್ಯಾವಳಿಯ ವೇಳೆ ಜೈ ಶ್ರೀರಾಮ್ ಎಂದು ಘೋಷಣೆ ವಿಚಾರದಲ್ಲಿ ನಡೆದ ಹಲ್ಲೆ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದ್ದು, ಇಂದಿನಿಂದ ಮೂರು ದಿನಗಳ ಕಾಲ ಸೆಕ್ಷನ್ 144 ಜಾರಿಯಾಗಿದೆ.

section-144-in-bhadravati
ಭದ್ರಾವತಿಯಲ್ಲಿ ಮೂರು ದಿನ ಸೆಕ್ಷನ್ 144 ಜಾರಿ

By

Published : Mar 3, 2021, 2:04 AM IST

ಶಿವಮೊಗ್ಗ: ಭದ್ರಾವತಿಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಇಂದಿನಿಂದ ಮಾರ್ಚ್ 5ರ ತನಕ ಸೆಕ್ಷನ್ 144 ಜಾರಿ ಮಾಡಿ ಭದ್ರಾವತಿ ತಹಶೀಲ್ದಾರ್ ಸಂತೋಷ್ ಕುಮಾರ್ ಆದೇಶಿಸಿದ್ದಾರೆ.

ನಿಷೇಧಾಜ್ಞೆ ಜಾರಿ ಆದೇಶ ಪ್ರತಿ

ಫೆ. 28ರಂದು ಭದ್ರಾವತಿಯಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯ ವೇಳೆ ಜೈ ಶ್ರೀರಾಮ್ ಎಂದು ಘೋಷಣೆ ಹಾಕಿದ ಪರಿಣಾಮ ಬಿಜೆಪಿಯ ಐವರು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆ ನಡೆಸಿದವರನ್ನು ಬಂಧಿಸಬೇಕೆಂದು ಬಿಜೆಪಿ ಪ್ರತಿಭಟನೆ ನಡೆಸಿತ್ತು.

ಇದನ್ನೂ ಓದಿ:ಅಚಲ ನಂಬಿಕೆ, ವಾತ್ಸಲ್ಯಕ್ಕೆ ತಲೆಬಾಗುವೆ: ಗುಜರಾತ್ ಸ್ಥಳೀಯ​ ಚುನಾವಣೆ ಜಯಭೇರಿ ಬಳಿಕ ನಮೋ ಟ್ವೀಟ್

ಮಾರಾಮಾರಿಗೆ ಸಂಬಂಧಿಸಿದಂತೆ ಶಾಸಕ ಸಂಗಮೇಶ್ ಪುತ್ರ ಬಸವರಾಜ್ ಹಾಗೂ ಸಂಗಮೇಶ್ ಸಹೋದರ ಮೋಹನ್ ಅವರ ಇಬ್ಬರು ಪುತ್ರರ ಮೇಲೆ ದೂರು ದಾಖಲಾಗಿದ್ದು, ಶಾಸಕ ಪುತ್ರ ಹಾಗೂ ಸಹೋದರನ ಪುತ್ರರೂ ಸಹ ಪ್ರತಿ‌ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆೆಯಲ್ಲಿ ತಾಲೂಕು ದಂಡಾಧಿಕಾರಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.

ABOUT THE AUTHOR

...view details