ಶಿವಮೊಗ್ಗ: ಡಿಸೆಂಬರ್ 3 ರಂದು ನಗರದ ಹಳೆ ಭಾಗದಲ್ಲಿ ನಡೆದ ಅಹಿತಕರ ಘಟನೆಯ ಹಿನ್ನೆಲೆ ಜಾರಿ ಮಾಡಿದ್ದ ನಿಷೇಧಾಜ್ಞೆಯನ್ನು ಡಿ.9ರ ವರೆಗೂ ವಿಸ್ತರಿಸಿ ತಾಲೂಕು ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮೊದಲು ಡಿ.3 ರಿಂದ 5 ರ ವರೆಗೆ ಮೊದಲು ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ನಂತರ ಡಿ.7 ರ ತನಕ ವಿಸ್ತರಣೆ ಮಾಡಲಾಗಿತ್ತು. ಈಗ ಸೆಕ್ಷನ್ 144 ಅನ್ನು ಡಿ. 9 ರ ವರೆಗೆ ವಿಸ್ತರಣೆ ಮಾಡಲಾಗಿದೆ. ನಾಳೆ ಭಾರತ ಬಂದ್ ಹಿನ್ನೆಲೆ ಡಿ. 9 ರ ತನಕ ನಿಷೇಧಾಜ್ಞೆಯನ್ನು ವಿಸ್ತರಣೆ ಮಾಡಲಾಗಿದೆ. ಈ ಬಗ್ಗೆ ತಾಲೂಕು ದಂಡಾಧಿಕಾರಿ ನಾಗರಾಜ್ ಆದೇಶ ಹೊರಡಿಸಿದ್ದಾರೆ.