ಶಿವಮೊಗ್ಗ: ಮಾವ್ ಎಲಿ ಶೋಕಟಾನ್ ಕರಾಟೆ ದೋ ಅಸೋಸಿಯೇಷನ್ ಇಂಡಿಯಾ, ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದವು.
ಶಿವಮೊಗ್ಗದಲ್ಲಿ ನಡೆದ ಎರಡನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ - International Karate Tournament
ಮಾವ್ ಎಲಿ ಶೋಕಟಾನ್ ಕರಾಟೆ ದೋ ಅಸೋಸಿಯೇಷನ್ ಇಂಡಿಯಾ, ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿ ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದವು.
ಪಂದ್ಯಾವಳಿಯಲ್ಲಿ 12 ರಾಜ್ಯ ಹಾಗೂ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್ ದೇಶಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು. ಕರಾಟೆ ಪಂದ್ಯಾವಳಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಕೌಶಲ್ಯಗಳಿಂದ ಹೋರಾಡಿ ಎದುರಾಳಿಯನ್ನು ಮಣಿಸಿ ಪದಕಗಳನ್ನ ತಮ್ಮದಾಗಿಸಿಕೊಂಡರು. ಇನ್ನು ಕರಾಟೆ ಪಂದ್ಯಾವಳಿಯನ್ನ ಕಥಾ ಮತ್ತು ಕುಮತಿ ಎಂಬ ಎರಡು ವಿಭಾಗದಲ್ಲಿ ಆಯೋಜಿಸಲಾಗಿತ್ತು.
ಆಯೋಜಕರಾದ ವಿನೋದ್ ಮಾತನಾಡಿ, 12 ರಾಜ್ಯಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದು, ಎರಡು ವಿಭಾಗದಲ್ಲಿ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ. ಅತಿ ಹೆಚ್ಚು ಚಾಂಪಿಯನ್ ಆದ ತಂಡಕ್ಕೆ ಪಲ್ಸರ್ ಬೈಕ್ ನೀಡಲಾಗುವುದೆಂದು ತಿಳಿಸಿದರು. ಇದೊಂದು ಉತ್ತಮ ಅವಕಾಶ. ಜೊತೆಗೆ ರಾಷ್ಟ್ರೀಯ ಮಟ್ಟದ ಪಂದ್ಯದಲ್ಲಿ ಭಾಗವಹಿಸಿ ಪದಕ ಪಡೆಯುತ್ತಿರುವುದು ಖುಷಿ ತಂದಿದೆ ಎಂದು ಕ್ರೀಡಾಪಟುಗಳು ತಮ್ಮ ಅನುಭವ ಹಂಚಿಕೊಂಡರು.