ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಪಿಂಚಣಿ ಹಣ ಬಿಡುಗಡೆಗೆ ಆಗ್ರಹಿಸಿ ಎಸ್​ಡಿಪಿಐ ಪ್ರತಿಭಟನೆ - shimogga protest

ಸರ್ಕಾರ ಕೂಡಲೇ ಈ ಸಮಸ್ಯೆಗೆ ಸ್ಪಂದಿಸಿ ಕಳೆದ ಏಳು ತಿಂಗಳಿಂದ ಬಾಕಿ ಇರುವ ಪಿಂಚಣಿ ಹಣ ನೀಡುವ ಜೊತೆಯಲ್ಲಿ ನೂತನವಾಗಿ ಪಿಂಚಣಿ ಆದೇಶ ಪತ್ರ ಪಡೆದಿರುವ ಪಲಾನುಭವಿಗಳಿಗೂ ಪಿಂಚಣಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

protest
protest

By

Published : Sep 7, 2020, 2:26 PM IST

Updated : Sep 7, 2020, 8:25 PM IST

ಶಿವಮೊಗ್ಗ:ಪಿಂಚಣಿದಾರರಿಗೆ ನೀಡಬೇಕಾಗಿರುವ ಹಣವನ್ನು ಕೂಡಲೇ ನೀಡುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಎಸ್​ಡಿಪಿಐ ಪ್ರತಿಭಟನೆ

ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ, ಸಂಧ್ಯಾ ಸುರಕ್ಷಾ ಹೀಗೆ ಅನೇಕ ಯೋಜನೆಯಡಿಯಲ್ಲಿ ಆರ್ಥಿಕ ಸಹಾಯ ಪಡೆಯುತ್ತಿರುವ ಪಿಂಚಣಿದಾರರಿಗೆ ಕಳೆದ ಏಳು ತಿಂಗಳಿಂದ ಪಿಂಚಣಿ ಹಣ ಸರ್ಕಾರದಿಂದ ಸಂದಾಯವಾಗಿಲ್ಲದ ಕಾರಣ ಪಿಂಚಣಿಯನ್ನೆ ನಂಬಿಕೊಂಡು ಬದುಕುತ್ತಿದ್ದವರ ಜೀವನ ಅಸ್ತವ್ಯಸ್ತವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಎಸ್​ಡಿಪಿಐ ಪ್ರತಿಭಟನೆ
ಎಸ್​ಡಿಪಿಐ ಪ್ರತಿಭಟನೆ

ಹಾಗಾಗಿ ಸರ್ಕಾರ ಕೂಡಲೇ ಈ ಸಮಸ್ಯೆಗೆ ಸ್ಪಂದಿಸಿ ಕಳೆದ ಏಳು ತಿಂಗಳಿಂದ ಬಾಕಿ ಇರುವ ಪಿಂಚಣಿ ಹಣ ನೀಡುವ ಜೊತೆಯಲ್ಲಿ ನೂತನವಾಗಿ ಪಿಂಚಣಿ ಆದೇಶ ಪತ್ರ ಪಡೆದಿರುವ ಪಲಾನುಭವಿಗಳಿಗೂ ಪಿಂಚಣಿ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.

Last Updated : Sep 7, 2020, 8:25 PM IST

ABOUT THE AUTHOR

...view details