ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಎಸ್​ಬಿಐ ಬ್ಯಾಂಕ್‌ ಮ್ಯಾನೇಜರ್ ಆತ್ಮಹತ್ಯೆಗೆ ಶರಣು - ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ ನ್ಯೂಸ್

ಭದ್ರಾವತಿ ತಾಲೂಕಿನ ನಾಗತಿ ಬೆಳಗಲು ಗ್ರಾಮದ ಎಸ್​ಬಿಐ ಬ್ಯಾಂಕ್​ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Rajendra
Rajendra

By

Published : Aug 12, 2020, 10:31 AM IST

ಶಿವಮೊಗ್ಗ: ಎಸ್​ಬಿಐ ಬ್ಯಾಂಕ್ ಮ್ಯಾನೇಜರ್​ವೊಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ರಾಜೇಂದ್ರ (45) ನೇಣಿಗೆ‌ ಶರಣಾದ ಬ್ಯಾಂಕ್ ಮ್ಯಾನೇಜರ್. ಇವರು ಶಿವಮೊಗ್ಗದ ವಿನೋಬನಗರದಲ್ಲಿ ವಾಸವಿದ್ದು, ಭದ್ರಾವತಿ ತಾಲೂಕಿನ ನಾಗತಿ ಬೆಳಗಲು ಗ್ರಾಮದ ಎಸ್​ಬಿಐ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ರಾಜೇಂದ್ರ ಅವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details