ಶಿವಮೊಗ್ಗ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬ ಚಾಕು ಇರಿದಿರುವ ಘಟನೆ ಭದ್ರಾವತಿ ತಾಲೂಕಿನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸೆ.20ರಂದು ಭದ್ರಾವತಿಯ ನಿವಾಸಿಗಳಾದ ನವೀನ್, ಶ್ರೀಕಾಂತ್, ಕಿರಣ್ ಎಂಬುವರು ಸಮೀಪದ ಅಂತರಗಂಗೆ ದೇವಾಲಯಕ್ಕೆ ಹೋಗಿದ್ದರು. ದೇವಸ್ಥಾನದಿಂದ ಹಿಂತಿರುಗುವಾಗ ಮನು ಹಾಗು ಮಹೇಶ್ ಎನ್ನುವವರು ಬಂದಿದ್ದಾರೆ. ಮನು ಕಿರಣ್ ಎಂಬುವವರನ್ನು ಕಂಡು ಬೈಯಲು ಪ್ರಾರಂಭಿಸಿದ್ದಾನೆ. (ಈ ಹಿಂದೆ ಮನು ಮತ್ತು ಕಿರಣ್ ನಡುವೆ ಜಗಳಗಳಾಗಿದ್ದವು) ಬಳಿಕ ಇಬ್ಬರ ನಡುವೆ ಜಗಳ ತಾರಕಕ್ಕೇರಿದ್ದು, ಮನು ಕಿರಣ್ ಎಂಬುವವರ ತೊಡೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ.