ಕರ್ನಾಟಕ

karnataka

ETV Bharat / state

ಮಲೆನಾಡಿನಲ್ಲಿ ಜೋರಾಗಿದೆ ಸಂಕ್ರಾಂತಿ ಖರೀದಿ - ಶಿವಮೊಗ್ಗ ಸಂಕ್ರಾಂತಿ ಆಚರಣೆಗೆ ನಗರದ ಎಲ್ಲೆಡೆ ಸಿದ್ಧತೆ

ಶಿವಮೊಗ್ಗ, ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ನಗರದ ಎಲ್ಲೆಡೆ ಸಡಗರ ಸಂಭ್ರಮದ ಸಿದ್ಧತೆ ನಡೆದಿದೆ. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳು, ಪೂಜಾ ಸಾಮಾಗ್ರಿಗಳನ್ನು ಕೊಳುತ್ತಿದ್ದುದು ಸಾಮಾನ್ಯವಾಗಿತ್ತು.

sankranti-purchase-in-shivamogga
ಮಲೆನಾಡಿನಲ್ಲಿ ಜೋರಾಗಿದೆ ಸಂಕ್ರಾಂತಿ ಖರೀದಿ

By

Published : Jan 14, 2020, 8:09 PM IST

ಶಿವಮೊಗ್ಗ: ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ನಗರದ ಎಲ್ಲೆಡೆ ಸಡಗರ ಸಂಭ್ರಮದ ಸಿದ್ಧತೆ ನಡೆದಿದೆ. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳು, ಪೂಜಾ ಸಾಮಾಗ್ರಿಗಳನ್ನು ಕೊಳುತ್ತಿದ್ದುದು ಸಾಮಾನ್ಯವಾಗಿತ್ತು.

ಸಂಕ್ರಾಂತಿ ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ಹೂ, ಕಬ್ಬು ಮತ್ತು ಸಿದ್ಧಪಡಿಸಿದ ಎಳ್ಳು, ಬೆಲ್ಲ ಖರೀದಿ ಭರಾಟೆ ಜೋರಾಗಿತ್ತು. ನಗರದ ಗಾಂಬಜಾರ್, ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ ಮುಂತಾದ ಕಡೆಗಳಲ್ಲಿ ಕಬ್ಬು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

ಮಲೆನಾಡಿನಲ್ಲಿ ಜೋರಾಗಿದೆ ಸಂಕ್ರಾಂತಿ ಖರೀದಿ

ಸುಗ್ಗಿ ಹಬ್ಬವಾಗಿರುವ ಸಂಕ್ರಾಂತಿ ಯನ್ನು ಜನ ಸಡಗರದಿಂದ ಆಚರಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವ ಣಿಗೆ ಮಾಡಲಾಗುತ್ತದೆ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡುವುದೇ ಮಕರ ಸಂಕ್ರಾಂತಿ ವಿಶೇಷವಾಗಿದೆ. ಹಬ್ಬದ ಪ್ರಯುಕ್ತ ಬೆಲೆಯಲ್ಲಿ ಭಾರೀ ವ್ಯತ್ಯಾಸವೇನು ಕಂಡುಬಂದಿಲ್ಲ.

ABOUT THE AUTHOR

...view details