ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಉಪ್ಪಾರ ಬೀದಿಯ ಪ್ರಶಾಂತ್ ಎಂಬುವರು ಪಿಪಿಇ ಕಿಟ್ ಧರಿಸಿಕೊಂಡು ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಫೇಸ್ ಬುಕ್ ಹೆಸರಿನ ಸಲೂನ್ ಅನ್ನು ಪ್ರಶಾಂತ್ ನಡೆಸುತ್ತಿದ್ದಾರೆ. ಈ ವೃತ್ತಿಯಲ್ಲಿ ಮನುಷ್ಯರನ್ನು ಮುಟ್ಟದೆ ಕೆಲಸ ಮಾಡಲು ಆಗುವುದಿಲ್ಲ. ಅನ್ಲಾಕ್ ಆದ ಮೇಲೂ ಕೊರೊನಾ ಭಯದಿಂದ ಜನ ಸಲೂನ್ನತ್ತ ಅಷ್ಟಾಗಿ ಸುಳಿಯಲಿಲ್ಲ. ಅಲ್ಲದೇ ಬಂದವರು ಸಹ ತಮ್ಮ ಸುರಕ್ಷತೆಯನ್ನು ನೋಡುತ್ತಿದ್ದರು. ಹಾಗಾಗಿ ಪ್ರಶಾಂತ್ ಕೊರೊನಾದಿಂದ ದೂರವಿರಲು ಹಾಗೂ ಗ್ರಾಹಕರಿಗೆ ತಮ್ಮ ಸಲೂನ್ ಮೇಲೆ ವಿಶ್ವಾಸ ಬರುವಂತೆ ಮಾಡಲು ಆಸ್ಪತ್ರೆಯಲ್ಲಿ ಬಳಸುವ ಪಿಪಿಇ ಕಿಟ್ ಹಾಕಿಕೊಂಡು ತಮ್ಮ ವೃತ್ತಿಯನ್ನು ನಡೆಸುತ್ತಿದ್ದಾರೆ.
ಪಿಪಿಇ ಕಿಟ್ ಧರಿಸಿ ಸಲೂನ್ ಕೆಲಸ ಇದರಿಂದ ಗ್ರಾಹಕರು ಸಹ ವಿಶ್ವಾಸವಿಟ್ಟು ಈಗ ಪ್ರಶಾಂತ್ ಅವರ ಸಲೂನ್ ಬರುತ್ತಿದ್ದಾರೆ. ಪ್ರಶಾಂತ್ ಕೇವಲ ಪಿಪಿಇ ಕಿಟ್ ಹಾಕಿಕೊಳ್ಳುವುದಲ್ಲದೇ, ತಮ್ಮ ಅಂಗಡಿಗೆ ಬರುವವರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಾರೆ. ಪಿಪಿಇ ಕಿಟ್ ಹಾಕಿಕೊಳ್ಳುವುದರಿಂದ ಗ್ರಾಹಕರಿಗೆ ಹಾಗೂ ತಮಗೂ ಭಯವಿರುವುದಿಲ್ಲ. ಥರ್ಮಲ್ ಸ್ಕ್ರೀನಿಂಗ್ ನಡೆಸುವುದರಿಂದ ಇತರೆ ಗ್ರಾಹಕರಿಗೂ ಭಯವಿರುವುದಿಲ್ಲ.
ಪ್ರಶಾಂತ್ ಪಿಪಿಇ ಕಿಟ್ ಬೆಳಗ್ಗೆ ಹಾಕಿಕೊಂಡರೆ, ಮಧ್ಯಾಹ್ನದ ತನಕ ಕಿಟ್ ಬಿಚ್ಚುವುದಿಲ್ಲ. ಇವರು ಸದ್ಯ ಪ್ರತಿ ದಿನ ಒಂದೂಂದು ಕಿಟ್ ಬಳಸುತ್ತಿದ್ದಾರೆ. ತಾವು ಪಿಪಿಇ ಕಿಟ್ ಹಾಕಿಕೊಂಡಿದ್ದಕ್ಕೆ ಗ್ರಾಹಕರ ಬಳಿ ಹೆಚ್ಚಿನ ಹಣ ವಸೂಲಿ ಮಾಡುತ್ತಿಲ್ಲ. ಪ್ರಶಾಂತ್ ಗ್ರಾಹಕರಿಗೆ ಹೊರೆಯಾಗದಂತೆ ಸಲೂನ್ ನಡೆಸುತ್ತಿದ್ದಾರೆ. ಪಿಪಿಇ ಕಿಟ್ ಹಾಕಿಕೊಂಡು ಕೆಲಸ ಮಾಡುವುದು ಕಷ್ಟಕರವಾಗಿದ್ರು, ಪ್ರಶಾಂತ್ ಗ್ರಾಹಕರ ಸುರಕ್ಷತೆಗಾಗಿ ಕಿಟ್ ಧರಿಸಿ ಕೆಲಸ ಮಾಡುತ್ತಿದ್ದಾರೆ.