ಕರ್ನಾಟಕ

karnataka

ETV Bharat / state

'ಅಧಿಕಾರಿಗಳಿಗೆ ಲಂಚ ನೀಡಲು ಆಗುತ್ತಿಲ್ಲ': ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ದಂಪತಿ - sagara couple application for euthanasia

ಸಾಗರ ತಾಲೂಕು ಖಂಡಿಕಾ ಗ್ರಾಮ ಪಂಚಾಯತ್​ ವ್ಯಾಪ್ತಿಯ ಶ್ರೀಕಾಂತ್ ನಾಯ್ಕ್ ಹಾಗೂ ಸುಜಾತ ನಾಯ್ಕ್ ಎಂಬುವರು ದಯಾಮರಣ ನೀಡುವಂತೆ ರಾಷ್ಟ್ರಪತಿಗೆ ಅರ್ಜಿ ಕಳುಹಿಸಿದ್ದಾರೆ.

couple
ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ದಂಪತಿ

By

Published : Nov 10, 2022, 8:09 AM IST

Updated : Nov 10, 2022, 4:25 PM IST

ಶಿವಮೊಗ್ಗ: ಅಧಿಕಾರಿಗಳ ಲಂಚದ ಬೇಡಿಕೆಗೆ ಬೇಸತ್ತ ದಂಪತಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.‌ ಸಾಗರ ತಾಲೂಕು ಖಂಡಿಕಾ ಗ್ರಾಮ ಪಂಚಾಯತ್​ ವ್ಯಾಪ್ತಿಯ ಶ್ರೀಕಾಂತ್ ನಾಯ್ಕ್ ಹಾಗೂ ಸುಜಾತ ನಾಯ್ಕ್ ಎಂಬುವರು ನಮಗೆ ನ್ಯಾಯ ಕೊಡಿಸಿ, ಇಲ್ಲವೇ ದಯಾಮರಣಕ್ಕೆ ಒಪ್ಪಿಗೆ ಕೊಡಿ ಎಂದು ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.

ಈ ದಂಪತಿ ತಮ್ಮ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿದ್ದು, ಈಗಾಗಲೇ ಗ್ರಾಮ ಪಂಚಾಯತ್​ಗೆ ಹಣ ಕಟ್ಟಿದ್ದಾರೆ. ಇದೀಗ ತಾಲೂಕು ಪಂಚಾಯತ್​ನ ಹಿರಿಯ ಅಧಿಕಾರಿಯೊಬ್ಬರು 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಮತ್ತೋರ್ವ​ ಅಧಿಕಾರಿಯ ಮೂಲಕ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.

ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ದಂಪತಿ

ಇದನ್ನೂ ಓದಿ:ಸಿಗದ ಪರಿಹಾರ.. ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕುಟುಂಬ

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯನ್ನು‌ ಸಾಕಷ್ಟು ಸಲ ಭೇಟಿಯಾದ್ರೂ ಯಾವುದೇ ಪ್ರಯೋಜನವಾಗಿಲ್ಲ. ನಾವು ರೈತ ವರ್ಗದವರು, ನಮ್ಮ ಕೃಷಿ ಭೂಮಿಯನ್ನು ಬದಲಾಯಿಸಿ ಲೇಔಟ್ ನಿರ್ಮಾಣ ಮಾಡುತ್ತಿದ್ದೇವೆ. ಹಣ ನೀಡದ ಕಾರಣ ನಮ್ಮ ದಾಖಲೆಗಳನ್ನು ಬಿಡುಗಡೆ ಮಾಡುತ್ತಿಲ್ಲ. ಇದರಿಂದ ನಮಗೆ ದಯಾಮರಣ ನೀಡಿ ಎಂದು ದಂಪತಿ ಮನವಿ‌ ಮಾಡಿ, ಸಾಗರದ ಉಪ ವಿಭಾಗಿಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿದ್ದಾರೆ.

Last Updated : Nov 10, 2022, 4:25 PM IST

ABOUT THE AUTHOR

...view details