ಶಿವಮೊಗ್ಗ: ಸಾಗರ-ಜಂಬುಗಾರು-ತಾಳಗುಪ್ಪ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 152ರ ಮಾರ್ಗದಲ್ಲಿ ತಾಂತ್ರಿಕ ಪರಿಶೀಲನೆ ಕಾರ್ಯ ನಡೆಯುತ್ತಿದೆ.
ಸಾಗರ-ತಾಳಗುಪ್ಪ ರೈಲ್ವೆ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ - Alternative Path to Traffic
ಸಾಗರ-ತಾಳಗುಪ್ಪ ರೈಲ್ವೆ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ ನಡೆಯುತ್ತಿರುವ ಹಿನ್ನೆಲೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶ
ಹೀಗಾಗಿ ಅಕ್ಟೋಬರ್ 16ರ ಬೆಳಗ್ಗೆ 7.30ರಿಂದ ಅ. 17ರ ಬೆಳಗ್ಗೆ 7.30ರವರೆಗೆ ರಸ್ತೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಪರ್ಯಾಯವಾಗಿ ಲೆವೆಲ್ ಕ್ರಾಸ್ ನಂ. 147ರ ಸಾಗರ-ಕಾನಲೆ ಕ್ರಾಸ್-ಗಡೆಮನೆ-ತಾಳಗುಪ್ಪ ಅಥವಾ ಸಿದ್ದಾಪುರ ಮುಖಾಂತರ ಹಾಗೂ ಸಿದ್ದಾಪುರ ಲೆವೆಲ್ ಕ್ರಾಸಿಂಗ್-13ರ ಸಾಗರ-ಕೆಳದಿ-ಕಾಗೋಡು-ತಾಳಗುಪ್ಪ ಮಾರ್ಗವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.