ಶಿವಮೊಗ್ಗ: ಸಾಹಿತಿ ಭಗವಾನ್ರವರ ವಿವಾದಾತ್ಮಕ ಕೃತಿ ರಾಮಮಂದಿರ ಏಕೆ ಬೇಕು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕುರಿತು ಪೊಲೀಸರ ವಿರುದ್ದ ಸಾಗರದ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸಾಗರದ ಜೆಎಂಎಫ್ಸಿ ನ್ಯಾಯಲಯ ಸಾಹಿತಿ ಭಗವಾನ್ರನ್ನು ಕೋರ್ಟ್ಗೆ ಹಾಜರು ಪಡಿಸುವಂತೆ ಮೈಸೂರು ಎಸ್ಪಿಗೆ ನೋಟಿಸ್ ಜಾರಿ ಮಾಡಿದೆ.
ಸಾಹಿತಿ ಭಗವಾನ್ರವರ ರಾಮಮಂದಿರ ಏಕೆ ಬೇಕು ಕೃತಿಯ ವಿರುದ್ಧ ಸಾಗರದ ಜೆಎಂಎಪ್ಸಿ ನ್ಯಾಯಲಯದಲ್ಲಿ ಸಾಗರ ತಾಲೂಕಿನ ಇಕ್ಕೇರಿಯ ಸಂಘ ಪರಿವಾರದ ಮಹಾಬಲೇಶ್ವರ್ ಎಂಬುವರು ಖಾಸಗಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆಗಾಗಿ ಸಾಗರ ಕೋರ್ಟ್ 30-08-2022 ರಂದು ಕೋರ್ಟ್ಗೆ ಹಾಜರಾಗಲು ನೋಟಿಸ್ ಜಾರಿ ಮಾಡಿತ್ತು.