ಶಿವಮೊಗ್ಗ :ಸಾಗರ ನಗರಸಭೆ ಆಡಳಿತದ ವೈಖರಿ ಖಂಡಿಸಿ ನಗರ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ನಗರಸಭೆ ಆಡಳಿತ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ನಿಂದ ಪ್ರತಿಭಟನೆ - shivamogga district News
ರಸ್ತೆ ಗುಂಡಿ ಮತ್ತು ಸರಿಯಾದ ನೀರಿನ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ನಗರಸಭೆ ವಿರುದ್ಧ ಸಾಗರ ನಗರ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹದಿನೈದು ದಿನದ ಒಳಗೆ ಅವ್ಯವಸ್ಥೆ ಸರಿಪಡಿಸುವಂತೆ ಗಡುವು ನೀಡಿದ್ದಾರೆ.
ಸಾಗರ ನಗರಸಭೆ
ರಸ್ತೆ ಗುಂಡಿಗಳನ್ನು ಮುಚ್ಚದೇ ಮತ್ತು ಕುಡಿವ ನೀರಿನ ಪೂರೈಕೆ ಮಾಡದೇ ನಗರಸಭೆ ಜನ ವಿರೋಧಿ ಆಡಳಿತ ನಡೆಸುತ್ತಿದೆ. ಈ ಬಗ್ಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂದ ನಂತರ ನಗರದಲ್ಲಿ ಡೆಂಘೀ ಹಾವಳಿ ಹೆಚ್ಚಾಗಿದೆ. ನಗರಸಭೆಯಲ್ಲಿ ಬಿಜೆಪಿ ಆಡಳಿತ ಬಂದಾಗಿನಿಂದ ಅಭಿವೃದ್ದಿಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು. ನಗರಸಭೆ ಪೌರಾಯುಕ್ತರಿಗೆ ಸದಸ್ಯೆ ಲಲಿತಮ್ಮ ಹಾಗೂ ನಗರ ಕಾಂಗ್ರೆಸ್ ಆಧ್ಯಕ್ಷ ತಸ್ರೀಫ್ರನ್ನ ತರಾಟೆಗೆ ತೆಗೆದುಕೊಂಡರು. ಇನ್ನೂ ಹದಿನೈದು ದಿನದ ಒಳಗೆ ಅವ್ಯವಸ್ಥೆ ಸರಿಪಡಿಸುವಂತೆ ಎಚ್ಚರಿಕೆ ನೀಡಿದ್ದಾರೆ.