ಕರ್ನಾಟಕ

karnataka

ETV Bharat / state

ತಾಂಡಾಗಳನ್ನು ಕಂದಾಯ ಗ್ರಾಮ ಎಂದು ಘೋಷಿಸುವಂತೆ ಎಸ್.ಶಿವಮೂರ್ತಿ ನಾಯ್ಕ ಒತ್ತಾಯ - latest shimoga news

ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮ ಎಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಶಿವಮೂರ್ತಿ ನಾಯ್ಕ ಒತ್ತಾಯಿಸಿದರು.

ತಾಂಡಗಳನ್ನು ಕಂದಾಯ ಗ್ರಾಮವೆಂದು ಘೋಷಿಸುವಂತೆ ಎಸ್.ಶಿವಮೂರ್ತಿ ನಾಯ್ಕ ಒತ್ತಾಯ

By

Published : Oct 22, 2019, 3:41 PM IST

ಶಿವಮೊಗ್ಗ: ರಾಜ್ಯದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮ ಎಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಶಿವಮೂರ್ತಿ ನಾಯ್ಕ ಒತ್ತಾಯಿಸಿದರು.

ತಾಂಡಗಳನ್ನು ಕಂದಾಯ ಗ್ರಾಮವೆಂದು ಘೋಷಿಸುವಂತೆ ಎಸ್.ಶಿವಮೂರ್ತಿ ನಾಯ್ಕ ಒತ್ತಾಯ

ಸೋಮವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೂರ್ತಿ ನಾಯ್ಕ, ರಾಜ್ಯ ಸರಕಾರ ಈಗಾಗಲೇ ಕೆಲವು ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಿದ್ದರೂ ಸಹ ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಮೂಲ ಸೌಲಭ್ಯ ಒದಗಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ತಾಂಡಾಗಳನ್ನು ಕಂದಾಯ ಗ್ರಾಮವಾಗಿಸುವ ಮಸೂದೆಗೆ ರಾಷ್ಟ್ರಪತಿಗಳು ಅನುಮೋದನೆ ನೀಡಿದರೂ ರಾಜ್ಯ ಸರ್ಕಾರ ಘೋಷಣೆ ಮಾಡಿಲ್ಲ. ಲಂಬಾಣಿ ಮತ್ತಿತರ ಶೋಷಿತ, ದಲಿತ ಬುಡಕಟ್ಟುಗಳ ತಾಂಡಾ, ಹಟ್ಟಿ, ಹಾಡಿ, ವಾಡಿ ಮುಂತಾದ ಪಾಳ್ಯ ನಿವಾಸಿಗಳು ರಸ್ತೆ, ಸಾರಿಗೆ, ವಿದ್ಯುತ್, ಕುಡಿವ ನೀರು, ಅಂಗನವಾಡಿ ಇತ್ಯಾದಿ ಮೂಲ ಸೌಲಭ್ಯವಿಲ್ಲದೇ ವಂಚಿತವಾಗಿದ್ದಾರೆ. ಇವುಗಳು ಕಂದಾಯ ಗ್ರಾಮ ಎಂದು ಘೋಷಣೆಯಾದರೆ ಮೂಲ ಸೌಲಭ್ಯ ಸಿಕ್ಕಂತಾಗುತ್ತದೆಯೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕುಮಾರನಾಯ್ಕ, ಹನುಮಂತ ನಾಯ್ಕ, ಮನೋಹರ್ ನಾಯ್ಕ, ಮಂಜುಳಾಬಾಯಿ, ಗಿರೀಶ್, ಕೃಷ್ಣಾನಾಯ್ಕ ಮತ್ತಿತರರು ಹಾಜರಿದ್ದರು.

ABOUT THE AUTHOR

...view details