ಕರ್ನಾಟಕ

karnataka

ETV Bharat / state

ಎಸ್​ಐಟಿ ಸ್ವತಂತ್ರ ತನಿಖಾ ಸಂಸ್ಥೆ, ಅದರ ಬಗ್ಗೆ ಟೀಕೆ-ಟಿಪ್ಪಣಿ ಸರಿಯಲ್ಲ : ಪ್ರವೀಣ್ ಸೂದ್ - Independent Investigation Agency

ಪ್ರತಿದಿನ ಈ ರೀತಿ ಮಾಡಬೇಕು, ಆ ರೀತಿ ಮಾಡಬಾರದು ಎಂದು ಹೇಳೋದು ಸೂಕ್ತವಲ್ಲ. ಏನು ಹೇಳುವುದು ಇದೆಯೋ ಅದನ್ನು ಎಸ್​ಐಟಿಯವರು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್​ಗೆ ತಲುಪಿಸುತ್ತಾರೆ..

s-it-independent-investigation-agency-criticism-is-not-correct-praveen-sood
ಪ್ರವೀಣ್ ಸೂದ್

By

Published : Apr 6, 2021, 7:40 PM IST

ಶಿವಮೊಗ್ಗ :ಎಸ್​ಐಟಿ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ. ಅದು ತನಿಖೆ ನಡೆಸುವಾಗ ಟೀಕೆ-ಟಿಪ್ಪಣಿ ಮಾಡುವುದು ಸರಿಯಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅಭಿಪ್ರಾಯ ಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಎಸ್​ಐಟಿ ನಿಷ್ಪಕ್ಷಪಾತವಾಗಿ, ಕಾನೂನು ಪ್ರಕಾರ ಕೆಲಸ ಮಾಡುತ್ತಿದೆ. ಪ್ರತಿದಿನ ಈ ರೀತಿ ಮಾಡಬೇಕು, ಆ ರೀತಿ ಮಾಡಬಾರದು ಎಂದು ಹೇಳೋದು ಸೂಕ್ತವಲ್ಲ. ಏನು ಹೇಳುವುದು ಇದೆಯೋ ಅದನ್ನು ಎಸ್​ಐಟಿಯವರು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್​ಗೆ ತಲುಪಿಸುತ್ತಾರೆ ಎಂದರು.

ಮಾಧ್ಯಮದವರೊಂದಿಗೆ ಮಾತನಾಡಿದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್

ಹುಣಸೋಡು ಸ್ಫೋಟ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯದಲ್ಲಿಯೇ ಚಾರ್ಜ್‌ಶೀಟ್ ಹಾಕಲಾಗುತ್ತದೆ. ಬಳಿಕ ಎಲ್ಲರಿಗೂ ತಿಳಿಯಲಿದೆ ಎಂದರು. ಶಿವಮೊಗ್ಗ ಜಿಲ್ಲೆಯಲ್ಲಿನ ಸಮಸ್ಯೆಯ ಬಗ್ಗೆ ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಪೊಲೀಸ್ ವಸತಿ ಗೃಹದ ಕೊರತೆಯ ಬಗ್ಗೆ ತಿಳಿಸಿದ್ದಾರೆ. ಇನ್ನೂ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದರು.

ABOUT THE AUTHOR

...view details