ಶಿವಮೊಗ್ಗ:ಮುಂಗಾರು ಆರಂಭದಿಂದ ಹಿಡಿದು ಡಿಸೆಂಬರ್ವರೆಗೂ ಮಲೆನಾಡಿನ ಹೆಬ್ಬಾಗಿಲೆಂದೇ ಖ್ಯಾತಿ ಪಡೆದಿರುವ ಶಿವಮೊಗ್ಗ ಜಿಲ್ಲೆಗೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ಜೋಗ ವೀಕ್ಷಣೆಗಾಗಿಯೇ ಬರುವವರ ಸಂಖ್ಯೆ ಅಸಂಖ್ಯಾತ. ಇದೀಗ ಕೊರೊನಾ ಭೀತಿಯಿಂದ ಜೋಗ ಪ್ರವಾಸ ಕೈಗೊಳ್ಳುವ ಜನರಿಗೆ ಇಲ್ಲಿನ ಜಿಲ್ಲಾಡಳಿತ ಕೊರೊನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ.
ಜೋಗ ಜಲಪಾತದ ಪ್ರವೇಶ ದ್ವಾರದಲ್ಲಿಯೇ ಪ್ರತಿಯೊಬ್ಬರ ದಾಖಲೆಗಳನ್ನು ಪರಿಶೀಲಿಸಿ ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರವೇ ಒಳಬಿಡಲಾಗುತ್ತಿದೆ. ಜಲಪಾತ ವೀಕ್ಷಣೆಗೆ 72 ಗಂಟೆಗಳ ಹಿಂದೆ ಪಡೆದಿರುವ ಆರ್ಟಿ-ಪಿಸಿಆರ್ ನೆಗೆಟಿವ್ ರಿಪೋರ್ಟ್ ಇರಬೇಕು. ಇಲ್ಲವೇ ಎರಡು ಡೋಸ್ ಲಸಿಕೆ ಪಡೆದ ದಾಖಲೆ ಇರಬೇಕು.