ಕರ್ನಾಟಕ

karnataka

ETV Bharat / state

ವಯೋನಿವೃತ್ತಿ ಹೊಂದಿದ ಚಾಲಕರನ್ನು ಜೀಪ್‌ನಲ್ಲಿ ಮನೆ ತಲುಪಿಸಿದ ಆರ್​ಟಿಒ ಅಧಿಕಾರಿ - RTO officer Swami Gowda retired in shivamogga

ಶಿವಮೊಗ್ಗ ಸಾರಿಗೆ ಕಚೇರಿಯಲ್ಲಿ ಸ್ವಾಮಿಗೌಡರು ಹಲವು ವರ್ಷಗಳಿಂದ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಇಂದು ಅವರು ನಿವೃತ್ತರಾಗಿದ್ದು, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅವರಿಗೆ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ವಯೋನಿವೃತ್ತಿ ಹೊಂದಿದ ಚಾಲಕ ನಿವೃತ್ತಿ
ವಯೋನಿವೃತ್ತಿ ಹೊಂದಿದ ಚಾಲಕ ನಿವೃತ್ತಿ

By

Published : Jul 1, 2022, 10:27 PM IST

ಶಿವಮೊಗ್ಗ: ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿಗೌಡರು ನಿವೃತ್ತರಾಗಿದ್ದು, ಅವರನ್ನು ಸಾರಿಗೆ ಅಧಿಕಾರಿ ದೀಪಕ್ ಎಲ್. ಅವರು ಮನೆಗೆ ತಮ್ಮ ವಾಹನದಲ್ಲಿ ತಾವೇ ಚಾಲನೆ ಮಾಡಿಕೊಂಡು ಹೋಗಿ ಬೀಳ್ಕೊಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.


ಸಾರಿಗೆ ಕಚೇರಿಯಲ್ಲಿ ಸ್ವಾಮಿಗೌಡರು ಹಲವು ವರ್ಷಗಳಿಂದ ವಾಹನ ಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಇಂದು ಅವರು ನಿವೃತ್ತರಾಗಿದ್ದು, ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅವರ ಮುಂದಿನ ನಿವೃತ್ತಿ ಜೀವನ ಸುಖಕರವಾಗಿರಲಿ, ಆರೋಗ್ಯವಾಗಿರಲಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾರೈಸಿದರು.

ನಂತರ ಸ್ವಾಮಿಗೌಡ ಅವರನ್ನು ಆರ್.ಟಿ.ಒ ಅಧಿಕಾರಿ ದೀಪಕ್ ಅವರೇ ವಾಹನ ಚಾಲನೆ ಮಾಡಿಕೊಂಡು ಹೋಗಿ ಮನೆಗೆ ಬಿಟ್ಟು ಬಂದರು. ಈ ಸಂದರ್ಭದಲ್ಲಿ ಮೋಟಾರು ವಾಹನ ನಿರೀಕ್ಷಕ ಮಲ್ಲೇಶಪ್ಪ ಮೊದಲಾದವರಿದ್ದರು.

ಇದನ್ನೂ ಓದಿ:ಚರ್ಚೆ ಹುಟ್ಟು ಹಾಕಿದ ಕರ್ನಾಟಕ ಶಾಸಕರ ಲೇಹ್-ಲಡಾಖ್​ ಪ್ರವಾಸ

For All Latest Updates

ABOUT THE AUTHOR

...view details