ಕರ್ನಾಟಕ

karnataka

ETV Bharat / state

ಗಿರೀಶ್ ಕಾರ್ನಾಡ್ ಸಂತಾಪ ಸಭೆ... ಆರ್​​ಟಿಒ ಅಧಿಕಾರಿಯಿಂದ ಅಗೌರವ ಆರೋಪ

ಸಚಿವ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ದಿವಂಗತ ಗಿರೀಶ್ ಕಾರ್ನಾಡ್ ಅವರ ಅಗಲಿಕೆಗೆ ಸಂತಾಪ ಸೂಚಿಸಲಾಯಿತು. 30 ಸೆಕೆಂಡ್ ಗಳವರೆಗೆ ನಡೆದ ಸಂತಾಪ ಸಭೆಯಲ್ಲಿ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವರಾಜ್ ಪಾಟೀಲ್​ ತಮ್ಮ ಸ್ಥಾನದಿಂದ ಎದ್ದೇಳದೆ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವರಾಜ್ ಪಾಟೀಲ್

By

Published : Jun 11, 2019, 7:42 PM IST

ಶಿವಮೊಗ್ಗ: ಜಿಲ್ಲಾ ಪಂಚಾಯತ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ದಿವಂಗತ ಗಿರೀಶ್ ಕಾರ್ನಾಡ್ ಅವರ ಅಗಲಿಕೆಗೆ ಸಂತಾಪ ಸೂಚಿಸಲಾಯಿತು.

30 ಸೆಕೆಂಡ್​ಗಳವರೆಗೆ ನಡೆದ ಸಂತಾಪ ಸಭೆಯಲ್ಲಿ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವರಾಜ್ ಪಾಟೀಲ್ ತಮ್ಮ ಸ್ಥಾನದಿಂದ ಎದ್ದೇಳದೆ ಅಗೌರವ ಸೂಚಿಸಿದರು ಎಂಬ ಆರೋಪ ಕೇಳಿಬಂದಿದೆ.

ಖ್ಯಾತ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಲು ಸಭೆಯಲ್ಲಿ ನಾಡಗೀತೆ ಆರಂಭವಾದಾಗ ಎಲ್ಲರಿಗೂ ಎದ್ದು ನಿಂತು ಗೌರವ ಸೂಚಿಸುವಂತೆ ತಿಳಿಸಲಾಗಿತ್ತು. ಆದ್ರೆ ಈ ವೇಳೆ ಸಭೆಯಲ್ಲಿದ್ದ ಸಚಿವ ಡಿಸಿ ತಮ್ಮಣ್ಣ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಕುಮಾರ ಬಂಗಾರಪ್ಪ, ಆರಗ ಜ್ಞಾನೇಂದ್ರ, ಹರತಾಳ ಹಾಲಪ್ಪ, ಅಶೋಕ್ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರುದ್ರೇಗೌಡ, ಆರ್. ಪ್ರಸನ್ನಕುಮಾರ್, ಸಂಸದ ಬಿ.ವೈ. ರಾಘವೇಂದ್ರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಎದ್ದು ನಿಂತು ಗೌರವ ಸೂಚಿಸಿದರು.

ಕಾರ್ನಡ್​ ಸಂತಾಪ ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ಅಗೌರವ ಆರೋಪ

ಆದ್ರೆ, ಆರ್ ಟಿ ಒ ಶಿವರಾಜ್ ಪಾಟೀಲ್ ಮಾತ್ರ ಕೆಡಿಪಿ ಸಭೆಯ ಅಂತಿಮದವರೆಗೂ ತೂಕಡಿಸಿಯೇ ಕುಳಿತು ಅಗೌರವದಿಂದ ನಡೆದುಕೊಂಡಿದ್ದು, ಕಾರ್ನಾಡ್​ರ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ABOUT THE AUTHOR

...view details