ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಜಮೀನಿನ NOC ನೀಡಲು ₹70 ಸಾವಿರ ಲಂಚದ ಬೇಡಿಕೆ ಆರೋಪ.. ಎಸಿಬಿ ಬಲೆಗೆ ಪಿಡಿಓ - Rs. 70,000 bribery Demand by PDO to give NOC

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಿಳಕಿ ಗ್ರಾಮದಲ್ಲಿ ಪಿಡಿಓ ಲಂಚ ಪಡೆಯುತ್ತಿರುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಮೀನಿನ ಎನ್ಓಸಿ ನೀಡಲು 70 ಸಾವಿರ ರೂ. ಲಂಚ ಕೇಳಿದ್ದರು ಎನ್ನಲಾಗ್ತಿದೆ.

bribery Demand by PDO
ಎಸಿಬಿ ಬಲೆಗೆ ಪಿಡಿಓ

By

Published : Jan 11, 2022, 8:30 PM IST

ಶಿವಮೊಗ್ಗ: ಗ್ರಾಮ ಪಂಚಾಯತ್​ ಪಿಡಿಓ 70 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಭದ್ರಾವತಿ ತಾಲೂಕಿನ ಬಿಳಕಿ ಗ್ರಾಮದಲ್ಲಿ ನಡೆದಿದೆ. ಬಿಳಕಿ ಗ್ರಾಮ ಪಂಚಾಯತ್​ ಪಿಡಿಓ ಕೇಶವಮೂರ್ತಿ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ.

ಜಮೀನು ಎನ್​​ಓಸಿ ನೀಡಲು ಲಂಚ:

ಜಮೀನಿನ ಎನ್ಓಸಿ ನೀಡಲು 70 ಸಾವಿರ ರೂ. ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಿಡಿಓ ಅವರು ಜಮೀನಿನ ಕುರಿತು ಎನ್​ಓಸಿ ನೀಡಲು 75 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗ್ತಿದೆ. ಮೊದಲು 5 ಸಾವಿರ ರೂ. ಲಂಚ ಪಡೆದಿದ್ದರು. ಮಂಗಳವಾರ ದೂರು ನೀಡಿದವನಿಂದ 70 ಸಾವಿರ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ:ಡಿಕೆ ಬ್ರದರ್ಸ್ ಸೇರಿ 41 ಕಾಂಗ್ರೆಸ್​ ನಾಯಕರ ವಿರುದ್ಧ ಮತ್ತೊಂದು ಎಫ್​ಐಆರ್!

ಶಿವಮೊಗ್ಗ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪಿಡಿಓ ಕೇಶವ‌ಮೂರ್ತಿಯನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ‌.

ABOUT THE AUTHOR

...view details