ಶಿವಮೊಗ್ಗ: ಭದ್ರಾವತಿಯ ಹೊಸಮನೆ ಬಡಾವಣೆಯ ಹನುಮಂತನಗರದ ನಿವಾಸಿಯಾಗಿದ್ದ ರೌಡಿ ಶೀಟರ್ ಶಾರೂಕ್ನ ಮೃತದೇಹ ಆತನ ಮನೆ ಬಳಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ರೌಡಿ ಶೀಟರ್ ಶಾರೂಕ್ನ ತಲೆ ಭಾಗಕ್ಕೆ ಹೊಡೆದಿದ್ದು, ಆತನ ಮನೆ ಬಳಿಯ ಖಾಲಿ ನಿವೇಶನದಲ್ಲಿ ಶವವಾಗಿ ಬಿದ್ದಿದ್ದಾನೆ. ಶಾರೂಕ್ ಭದ್ರಾವತಿಯಲ್ಲಿ ಕಳ್ಳತನ, ಗಾಂಜಾ ಮಾರಾಟ, ಬೆದರಿಸಿ ಹಣ ಕೀಳುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸ್ ಲಿಸ್ಟ್ನಲ್ಲಿ ರೌಡಿ ಶೀಟರ್ ಆಗಿದ್ದ.