ಶಿವಮೊಗ್ಗ: ಹಳೆ ವೈಷಮ್ಯದ ಹಿನ್ನೆಲೆ ರೌಡಿಶೀಟರ್ ಓರ್ವನ ಸಹೋದರನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಹೇಮಂತ್ ಕುಮಾರ್ ಅಲಿಯಾಸ್ ಕರಿಚಿಕ್ಕಿ (38) ಕೊಲೆಯಾದ ದುರ್ದೈವಿ. ಪ್ರಕರಣ ಸಂಬಂಧ ಮುಬಾರಕ್ ಅಲಿಯಾಸ್ ಮುಬ್ಬು, ಖಲೀಲ್ ಹಾಗೂ ಸತ್ಯಾನಂದ ಎಂಬವರನ್ನು ಹಳೇ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಹೇಮಂತ್ ಕುಮಾರ್ ಆಟೋ ಚಾಲಕನಾಗಿದ್ದನು. ಈತ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೈನ್ ಶಾಪ್ಗೆ ತೆರಳಿದ್ದಾಗ ಈ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಹೇಮಂತ್ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೂವರು ಆರೋಪಿಗಳ ಬಂಧನ:ವೈನ್ ಶಾಪ್ನಲ್ಲಿಹೇಮಂತ್ ಕುಮಾರನ ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಹಳೇ ನಗರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ. ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ಭದ್ರಾವತಿಯಲ್ಲಿ ಮುಜಾಹಿದ್ದೀನ್ ಅಲಿಯಾಸ್ ಮುಜ್ಜು ಎಂಬಾತನ ಹತ್ಯೆ ನಡೆದಿತ್ತು. ಸದ್ಯ ಬಂಧಿತನಾರುವ ಮುಬಾರಕ್ ಕೊಲೆಗೀಡಾದ ಮುಜಾಹಿದ್ದೀನ್ನ ಸಹೋದರನಾಗಿದ್ದು ಹಳೆ ವೈಷಮ್ಯದ ಹಿನ್ನೆಲೆ ಈ ಕೃತ್ಯ ನಡೆಸಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ:ಹುಬ್ಬಳ್ಳಿ: ಅಣ್ಣನಿಂದ ತಮ್ಮನ ಹತ್ಯೆ