ಶಿವಮೊಗ್ಗ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಶಿವಮೊಗ್ಗ ನಗರ ವಿಭಾಗದ ರೌಡಿಗಳ ಪರೇಡ್ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ರೌಡಿ ಪರೇಡ್... ರೌಡಿಗಳಿಗೆ ಎಸ್ಪಿ ಶಾಂತರಾಜು ಖಡಕ್ ವಾರ್ನಿಂಗ್
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಇಂದು 200 ಕ್ಕೂ ಹೆಚ್ಚು ರೌಡಿಗಳ ಪರೇಡ್ ನಡೆಸಿ ಪುನಃ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು. ಒಂದು ವೇಳೆ ಭಾಗಿಯಾಗಿದ್ದು ಕಂಡು ಬಂದ್ರೆ, ಗಡಿಪಾರು ಮಾಡುವ ಎಚ್ಚರಿಕೆ ನೀಡಿದರು.
ಪೊಲೀಸ್ ಪರೇಡ್ ಗ್ರೌಂಡ್ ನಲ್ಲಿ ನಡೆದ ರೌಡಿ ಪರೇಡ್ ನಲ್ಲಿ 200 ಕ್ಕೂ ಅಧಿಕ ರೌಡಿಗಳು ಭಾಗಿಯಾಗಿದ್ದರು. ಎಸ್ಪಿ ಕೆ.ಎಂ.ಶಾಂತರಾಜು ಪೊಲೀಸ್ ಠಾಣಾವಾರು ರೌಡಿಗಳನ್ನು ವಿಚಾರಣೆ ನಡೆಸಿದರು. ಈ ವೇಳೆ ರೌಡಿಗಳಿಗೆ ಮತ್ತೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದರು. ಒಂದು ವೇಳೆ ಭಾಗಿಯಾಗಿದ್ದು ಕಂಡು ಬಂದ್ರೆ, ಗಡಿಪಾರು ಮಾಡುವ ಎಚ್ಚರಿಕೆ ನೀಡಿದರು. ಇಂದು ರೌಡಿ ಪರೇಡ್ಗೆ ಬಾರದ ರೌಡಿಗಳ ಪಟ್ಟಿ ರೆಡಿ ಮಾಡಿ, ಅವರನ್ನು ತಾಲೂಕು ದಂಡಾಧಿಕಾರಿಗಳ ಮುಂದೆ ಹಾಜರು ಪಡಿಸಿ, ಅವರಿಗೆ ಸೂಕ್ತ ಶಿಕ್ಷೆ ಕೊಡಿಸಬೇಕು ಎಂದು ಕೆಳಗಿನ ಅಧಿಕಾರಿಗಳಿಗೆ ಸೂಚಿಸಿದರು.
ಗಾಂಜಾ ಪೆಟ್ಲರ್ ಗಳನ್ನು ಕರೆಯಿಸಿ, ಮತ್ತೆ ಗಾಂಜಾ ಮಾರಾಟಕ್ಕೆ ಮುಂದಾಗಬಾರದು ಎಂದು ಸೂಚಿಸಿದರು. ಅಲ್ಲದೆ ಪ್ರಮುಖ ರೌಡಿಗಳಾದ ಕೊಕ್ಕರೆ ಶಾಮ, ಹಂದಿ ಅಣ್ಣಿರವರಿಗೆ ಬೆದರಿಸುವುದು, ರಿಯಲ್ ಎಸ್ಟೇಟ್ ಹೆಸರಿನಲ್ಲಿ ಬೆದರಿಕೆ, ಇಸ್ಪೀಟ್ ನಡೆಸದಂತೆ ಖಡಕ್ ಎಚ್ಚರಿಕೆ ನೀಡಿದರು. ಈ ವೇಳೆ ಎಎಸ್ಪಿ ಡಾ.ಶೇಖರ್, ಡಿವೈಎಸ್ಪಿ ಈಶ್ವರ ನಾಯಕ್, ಸಿಪಿಐಗಳಾದ ವಸಂತ್, ಚಂದ್ರಶೇಖರ್ ಸೇರಿ ಇತರರು ಹಾಜರಿದ್ದರು.