ಕರ್ನಾಟಕ

karnataka

ETV Bharat / state

ಸಿಎಂ ತವರು ಕ್ಷೇತ್ರದಲ್ಲಿ ನದಿ ಪುನಶ್ಚೇತನ ಕಾರ್ಯಾಗಾರ.. - ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಆರ್ಟ್ ಆಫ್ ಲೀವಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ನದಿಗಳ ಪುನಶ್ವೇತನ ಕಾರ್ಯಾಗಾರವನ್ನು ಆಯ್ದ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ.

ನದಿ ಪುನಶ್ಚೇತನ ಕಾರ್ಯಾಗಾರ
ನದಿ ಪುನಶ್ಚೇತನ ಕಾರ್ಯಾಗಾರ

By

Published : Apr 14, 2020, 7:46 PM IST

ಶಿವಮೊಗ್ಗ :ಸಿಎಂ ಯಡಿಯೂರಪ್ಪನವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ನದಿಗಳ ಪುನಶ್ಚೇತನ ಕಾರ್ಯಾಗಾರ ನಡೆಸಲಾಯಿತು. ಶಿಕಾರಿಪುರದ ತಾಲೂಕು ಆಡಳಿತ ಭವನದಲ್ಲಿ ಈ ಕಾರ್ಯಾಗಾರವನ್ನು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ ಎಸ್ ಈಶ್ವರಪ್ಪ ಉದ್ಘಾಟಿಸಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಆರ್ಟ್ ಆಫ್ ಲೀವಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ನದಿಗಳ ಪುನಶ್ವೇತನ ಕಾರ್ಯಾಗಾರವನ್ನು ಆಯ್ದ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ.

ನದಿ ಪುನಶ್ಚೇತನ ಕಾರ್ಯಾಗಾರ..

ಇದರಿಂದ ಅಂರ್ತಜಲವನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಆರ್ಟ್ ಆಫ್ ಲೀವಿಂಗ್​​​ನವರು ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸದ ಬಿ ವೈ ರಾಘವೇಂದ್ರ, ಜಿಪಂ ಸಿಇಒ ಶ್ರೀಮತಿ ವೈಶಾಲಿ, ತಾಪಂ ಅಧ್ಯಕ್ಷರು, ಜಿಪಂ ಹಾಗೂ ತಾಪ‌ಂ ಸದಸ್ಯರು ಹಾಜರಿದ್ದರು.

ABOUT THE AUTHOR

...view details